ಕ್ರೀಡೆ

ಪಾಕಿಸ್ತಾನ್ ಲೀಗ್ ನಲ್ಲಿ ಆಡಲು ‘ವಿರಾಟ್’ ಗೆ ಡಿಮ್ಯಾಂಡ್

Pinterest LinkedIn Tumblr


ದುಬೈ: ಕ್ರಿಕೆಟ್‌ ಜಗತ್ತಿನಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಭಾರೀ ಸಂಖ್ಯೆ ಯಲ್ಲಿ ಅಪಾರ ಅಭಿಮಾನಿಗಳು ಹೊಂದಿದ್ದಾರೆ. ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಅನೇಕರ ಹೃದಯವನ್ನು ಗೆದ್ದಿದ್ದಾರೆ. ಈ ಮೂಲಕ ಹಲವು ದೇಶದ ಜೊತೆಗೆ ಪಾಕಿಸ್ತಾನದಲ್ಲೂ ಸಹ ಅಪಾರ ಫ್ಯಾನ್‌ಗಳನ್ನು ಹೊಂದಿದ್ದಾರೆ.

ದುಬೈನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್‌ ಲೀಗ್‌ ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಪಂದ್ಯದ ವೇಳೆ ಪಾಕ್‌ ಅಭಿಮಾನಿಗಳು `ನಾವು ವಿರಾಟ್‌ ಕೊಹ್ಲಿ ಆಟವನ್ನು ಪಿಎಸ್‌ಎಲ್‌ ನಲ್ಲಿ ನೋಡಲು ಬಯಸುತ್ತೇವೆ’ ಎಂದು ಬೋರ್ಡ್‌ ಎತ್ತಿ ಹಿಡಿದಿದ್ದರು.

ಅಭಿಮಾನಿಗಳ ಫೋಟೋ ಎಲ್ಲೆಡೆ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

Comments are closed.