
ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಲಂಕಾ ಅಭಿಮಾನಿಯೊಬ್ಬರಿಗೆ ಸ್ವದೇಶಕ್ಕೆ ಮರಳಲು ವಿಮಾನ ಟಿಕೆಟ್ ವ್ಯವಸ್ಥೆ ಮಾಡುವ ಮೂಲಕ ಔದಾರ್ಯ ಮೆರೆದಿದ್ದಾರೆ.
ಶ್ರೀಲಂಕಾ ಆಟ ನೋಡಲು ಭಾರತಕ್ಕೆ ಆಗಮಿಸಿದ್ದ ಮೊಹಮ್ಮದ್ ನೀಲಂ ಭಾರತ ಪ್ರವಾಸಕ್ಕಾಗಿ ಮೊದಲೇ ಟಿಕೆಟ್ ಬುಕ್ಕಿಂಗಳನ್ನು ಮಾಡಿದ್ದರು. ಆದರೆ ದೆಹಲಿ ಟೆಸ್ಟ್ ವೇಳೆ ಮೊಹಮ್ಮದ್ ತಂದೆಯ ಆರೋಗ್ಯ ಸ್ಥಿತಿ ಹದಗೆಟ್ಟಿರುವುದಾಗಿ ತಿಳಿದು ಆತ ಗೊಂದಲಕ್ಕೀಡಾಗಿದ್ದ. ಸದ್ಯ ನೀಲಂ ಬಳಿ ಹಿಂತಿರುಗಿ ಹೋಗಲು ಬೇಕಾದಷ್ಟು ಹಣ ಇಲ್ಲದಿರುವುದರಿಂದ ಆತ ಸಚಿನ್ ತೆಂಡೂಲ್ಕರ್ ಅವರ ಅಪ್ಪಟ ಅಭಿಮಾನಿ ಸುದೀರ್ ಗೌತಮ್ ಬಳಿ ತಮ್ಮ ಆತಂಕವನ್ನು ಹೇಳಿಕೊಳ್ಳುತ್ತಾರೆ.
ಸುಧೀರ್ ಗೌತಮ್ ಕೂಡಲೇ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ಬಳಿ ಮೊಹಮ್ಮದ್ ಪರಿಸ್ಥಿತಿ ಕುರಿತು ವಿವರಿಸುತ್ತಾರೆ. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ ತಾವು ಉಳಿದುಕೊಳ್ಳುವ ಹೋಟೆಲ್ ರೂಂಗೆ ಕರೆ ಮಾಡಿ ಕೂಡಲೇ(20 ಸಾವಿರ) ಮೊಹಮ್ಮದ್ ಹೆಸರಲ್ಲಿ ಟಿಕೆಟ್ ಬುಕ್ ಮಾಡುವಂತೆ ಸೂಚಿಸುತ್ತಾರೆ. ಇದರಿಂದ ಸ್ವದೇಶಕ್ಕೆ ಮರಳಿದ ನಾನು ತಂದೆಯ ಶಸ್ತ್ರಚಿಕಿತ್ಸೆ ವೇಳೆ ಬಳಿಯಿದ್ದು ತಂದೆಯನ್ನು ನೋಡಿಕೊಳ್ಳಲು ಸಾಧ್ಯವಾಯಿತು ಎಂದು ಮೊಹಮ್ಮದ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.
ಇನ್ನು ತಂದೆಯ ಶಸ್ತ್ರ ಚಿಕಿತ್ಸೆಗೆ ಹಣ ಸಹಾಯವನ್ನು ಮಾಡುವುದಾಗಿ ರೋಹಿತ್ ಶರ್ಮಾ ಅವರು ಹೇಳಿದರು. ನಿಜಕ್ಕೂ ಅವರ ಔದಾರ್ಯ ನನಗೆ ಹೆಚ್ಚು ಖುಷಿ ನೀಡಿದೆ. ಆದರೆ ತಂದೆಯ ಶಸ್ತ್ರಚಿಕಿತ್ಸೆಗಾಗಿ ನಾನು ಅವರಿಂದ ಹಣ ಸಹಾಯವನ್ನು ತೆಗೆದುಕೊಳ್ಳಲಿಲ್ಲ. ಸದ್ಯ ನನ್ನ ತಂದೆ ಆರೋಗ್ಯವಾಗಿದ್ದಾರೆ ಎಂದು ನೀಲಂ ಹೇಳಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಸಹ ಹೇಳಿರುವ ನೀಲಂ ವಿರಾಟ್ ಬಾಯ್ ನನಗೆ ಕರೆ ಮಾಡಿ ತಂದೆಯ ಯೋಗಕ್ಷೇಮವನ್ನು ವಿಚಾರಿಸಿದರು. ಜತೆಗೆ ಏನೇ ಸಹಾಯ ಬೇಕಾದರೂ ಸಂಕೋಚವಿಲ್ಲದೆ ಕೇಳುವಂತೆ ಹೇಳಿದ್ದರು ಎಂದರು. ವಿರಾಟ್ ಬಾಯ್ ಮದುವೆಗೆ ನಾನು ಶುಭಾ ಕೋರಿದೆ. ಭಾರತೀಯ ಕ್ರಿಕೆಟಿಗರ ಪ್ರೀತಿ ಸಿಕ್ಕಿರುವುದು ನಿಜಕ್ಕೂ ನನ್ನ ಪುಣ್ಯ ಎಂದು ನೀಲಂ ಹೇಳಿದ್ದಾರೆ.
Comments are closed.