ಕ್ರೀಡೆ

2007ರಲ್ಲಿ ಧೋನಿ ನಾಯಕರಾಗಲು ಕಾರಣವೇನು ಗೊತ್ತಾ?

Pinterest LinkedIn Tumblr


ಹೊಸದಿಲ್ಲಿ: ನಿಮಗೆಲ್ಲರಿಗೂ ತಿಳಿದಿರುವಂತೆಯೇ 2007ನೇ ಇಸವಿಯಲ್ಲಿ ಆಯೋಜನೆಗೊಂಡ ಚೊಚ್ಚಲ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದ ಯುವ ನಾಯಕ ಮಹೇಂದ್ರ ಸಿಂಗ್ ಧೋನಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಇಡೀ ದೇಶದ ಹೆಮ್ಮೆಗೆ ಕಾರಣವಾಗಿದ್ದರು.

ಅಷ್ಟಕ್ಕೂ ಹಿರಿಯರನ್ನು ಕಡೆಗಣಿಸಿ ಧೋನಿ ಅವರನ್ನು ನಾಯಕರಾಗಲು ಪ್ರೇರೇಪಿಸಿದ ಅಂಶ ಏನೆಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಇದಕ್ಕೆ ಎರಡು ವಿಶ್ವಕಪ್ ವಿಜೇತ ನಾಯಕರಾಗಿರುವ ಸ್ವತ: ಮಹಿ ಅವರೇ ವಿವರಿಸುತ್ತಾರೆ.

ಬಹಳಷ್ಟು ಹಿರಿಯ ಆಟಗಾರರು ನನ್ನನ್ನು ಬೆಂಬಲಿಸಿದ್ದರು. ನಾಯಕರನ್ನು ಆರಿಸುವ ವೇಳೆ ನಾನು ಚರ್ಚೆಯ ಭಾಗವಾಗಿರಲಿಲ್ಲ. ನನಗನಿಸುತ್ತದೆ ಎಲ್ಲವನ್ನು ಅವಲೋಕಿಸದ ಬಳಿಕ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಪಂದ್ಯವನ್ನು ಗ್ರಹಸುವ ನನ್ನದೇ ಆದ ಸಾಮರ್ಥ್ಯವನ್ನು ಪರಿಗಣಿಸಿರಬಹುದು ಎಂದು ಮಹಿ ವಿವರಿಸಿದರು.

ಪಂದ್ಯವನ್ನು ಗ್ರಹಿಸುವುದು ಅತಿ ಮುಖ್ಯವಾಗಿರುತ್ತದೆ. ತಂಡದಲ್ಲಿ ಅತ್ಯಂತ ಯುವ ಆಟಗಾರನಾಗಿರುವ ಹೊರತಾಗಿಯೂ ಹಿರಿಯ ಆಟಗಾರರು ಬಯಸಿದಾಗ ನನ್ನ ಸಲಹೆಯನ್ನು ನೀಡಲು ಹಿಂಜರಿಯುತ್ತಿರಲಿಲ್ಲ. ಬಹುಶ: ಇದು ನನ್ನನ್ನು ನಾಯಕರನ್ನಾಗಿ ಆಯ್ಕೆ ಮಾಡಲು ಹೇತುವಾಗಿರಬಹುದು ಎಂದು ಧೋನಿ ಸೇರಿಸಿದರು.

ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಅವರಂತಹ ಹಿರಿಯ ಆಟಗಾರರನ್ನು ಕಡೆಗಣಿಸಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಅವರಿಂದ ಧೋನಿ ನಾಯಕತ್ವವನ್ನು ಸ್ವೀಕರಿಸಿದ್ದರು. ಒಂದು ವರ್ಷದ ಬಳಿಕ ಅನಿಲ್ ಕುಂಬ್ಳೆ ನಿವೃತ್ತಿಯ ನಂತರ ಟೆಸ್ಟ್ ಕ್ರಿಕೆಟ್‌ನಲ್ಲೂ ಖಾಯಂ ನಾಯಕತ್ವವನ್ನು ಪಡೆದಿದ್ದರು.

ಬಳಿಕ ನಡೆದಿದ್ದು ಇತಿಹಾಸವೇ ಸರಿ. ಎಲ್ಲ ಐಸಿಸಿ ಟ್ರೋಫಿಗಳನ್ನು ಗೆದ್ದ ಮೊತ್ತ ಮೊದಲ ನಾಯಕ ಎಂಬ ಗೌರವಕ್ಕೆ ಪಾತ್ರವಾಗಿದ್ದರು.

Comments are closed.