ರಾಷ್ಟ್ರೀಯ

ಕಾಶ್ಮೀರ: ಲಷ್ಕರ್‌ ಇ ತೊಯ್ಬಾ ಉಗ್ರ ಸಂಘಟನೆ ತೊರೆದ ಫುಟ್‌ಬಾಲ್‌ ಆಟಗಾರ

Pinterest LinkedIn Tumblr


ಹೊಸದಿಲ್ಲಿ: ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಸೇರಿದ್ದ 20 ವರ್ಷದ ಕಾಶ್ಮೀರಿ ಫುಟ್ಬಾಲ್ ಆಟಗಾರ ಮಜೀದ್ ಇರ್ಶಾದ್ ಖಾನ್ ಗುರವಾರ ರಾತ್ರಿ 11.30ರ ಸುಮಾರಿಗೆ ಪೊಲೀಸರಿಗೆ ಶರಣಾಗಿದ್ದಾನೆ.

ಪತ್ರಿಕಾಗೋಷ್ಠಿ ನಡೆಸಿದ್ದ ಕಾಶ್ಮೀರ ಡಿಐಜಿ ಮುನೀರ್‌ ಖಾನ್‌, ಮಜೀದ್‌ ಇರ್ಶಾದ್‌ನ ಈ ದಿಟ್ಟ ನಡೆಯನ್ನು ನಾವೂ ಪ್ರಶಂಶಿಸುತ್ತೇವೆ. ಶೀಘ್ರದಲ್ಲೇ ಎಲ್ಲರಂತೇ ಆತನೂ ಕೂಡಾ ಸಾಮಾನ್ಯ ಜೀವನ ನಡೆಸುವಂತಾಗುತ್ತದೆ ಎಂದು ಹೇಳಿದ್ದಾರೆ.

‘ ಮಜೀದ್‌ ಈ ನಿರ್ಧಾರಕ್ಕೆ ಬರಲು ಕಟುಂಬ ವರ್ಗ, ಮಿತ್ರರು ಮತ್ತು ಸಾಮಾಜಿಕ ಜಾಲತಾಣದಿಂದ ಸಾಧ್ಯವಾಗಿದ್ದು, ಒಂದು ವೇಳೆ ಮಜೀದ್‌ ವಿರುದ್ಧ ಎಲ್ಲರೂ ನಿಂತಿದ್ದರೆ ಆತನ ಮನಃ ಪರಿವರ್ತನೆ ಸಾಧ್ಯವಾಗುತ್ತಿರಲಿಲ್ಲ’ ಎಂದು ಖಾನ್‌ ಹೇಳಿದ್ದಾರೆ. ಇದೇ ವೇಳೆ ಉಗ್ರ ಸಂಘಟನೆಯಲ್ಲಿರುವ ಎಲ್ಲಾ ಯುವಕರು ತಮ್ಮ ನಿರ್ಧಾರದಿಂದ ಹೊರ ಬಂದು ಮಜೀದ್‌ ರೀತಿಯಲ್ಲಿ ಜೀವನ ಸಾಗಿಸಿ ಎಂದು ಖಾನ್‌ ಕಿವಿ ಮಾತು ಹೇಳಿದ್ದಾರೆ.

ಗುರುವಾರ ರಾತ್ರಿ, ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳ ಜತೆಗೆ ದಕ್ಷಿಣ ಕಾಶ್ಮೀರದಲ್ಲಿರುವ ಭದ್ರತಾ ಶಿಬಿರಕ್ಕೆ ಆಗಮಿಸಿದ ಮಜೀದ್‌ ಆರ್ಷಿದ್‌ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಲೇಜು ವಿದ್ಯಾರ್ಥಿಯಾಗಿದ್ದ ಮಜೀದ್‌ ಅನಂತನಾಗ್‌ ಸ್ಥಳೀಯ ಫುಟ್ಬಾಲ್‌ ತಂಡದ ಗೋಲ್‌ ಕೀಪರ್‌ ಆಗಿದ್ದ. ಲಷ್ಕರ್ ಇ ತೋಯ್ಬಾ ಸಂಘಟನೆಗೆ ಸೇರಿದ್ದ ಮಜೀದ್‌ನ ಸ್ನೇಹಿತನನ್ನು ಭದ್ರತಾ ಪಡೆ ಇತ್ತೀಚೆಗೆ ಹೊಡೆದುರುಳಿಸಿತ್ತು. ಇದರಿಂದ ಬೇಸರಗೊಂಡ ಮಜೀದ್‌ ಅಕ್ಟೋಬರ್ ಅಂತ್ಯದಲ್ಲಿ ತಾನೂ ಉಗ್ರ ಸಂಘಟನೆ ಸೇರುವುದಾಗಿ ಹೇಳಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ.

ಇದನ್ನು ಗಮನಿಸಿದ ಪೊಲೀಸರು ಕೂಡಲೇ ಆತನ ಮಿತ್ರರಿಗೆ ಮತ್ತು ಕುಟುಂಬಸ್ಥರಿಗೆ ಮಜೀದ್‌ ಮೇಲೆ ಉಗ್ರ ಸಂಘಟನೆಯಿಂದ ಹಿಂಬರುವಂತೆ ಒತ್ತಡ ಹೇರಲು ಕೇಳಿಕೊಂಡಿದ್ದರು. ಅಲ್ಲದೇ ಈತನ ಹಿಂಬರುವಂತೆ ಸಾಮಾಜಿಕ ಜಾಲತಾಣದಲ್ಲಿ ಆತನ ತಾಯಿ ಕೇಳಿಕೊಂಡು ಅತ್ತಿದ್ದ ವೀಡಿಯೋ ವೈರಲ್‌ ಆಗಿತ್ತು.

ಇದನ್ನೆಲ್ಲಾ ಗಮನಿಸಿದ ಮಜೀದ್‌ ಮತ್ತೆ ಮನೆಗೆ ಮರಳಿದ್ದಾನೆ, ಅಲ್ಲೇ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಉಗ್ರ ಸಂಘಟನೆಯನ್ನು ಸೇರುವುದಿಲ್ಲ ಎಂದಿದ್ದಾನೆ.

Comments are closed.