ಕ್ರೀಡೆ

ಟೀಂ ಇಂಡಿಯಾಗೆ ಧೋನಿಯೇ ಬಾಸ್ ! ಬಹಿರಂಗವಾಯ್ತು ಧೋನಿ ಧ್ವನಿ…

Pinterest LinkedIn Tumblr

ಪುಣೆ: ಟೀಂ ಇಂಡಿಯಾಗೆ ಅಧಿಕೃತವಾಗಿ ವಿರಾಟ್ ಕೊಹ್ಲಿ ನಾಯಕನಾಗಿದ್ದರೂ ಧೋನಿಯೇ ಬಾಸ್ ಎನ್ನುವುದು ದ್ವಿತೀಯ ಏಕದಿನ ಪಂದ್ಯದಲ್ಲಿ ಮತ್ತೆ ಸಾಬೀತಾಗಿದೆ. ಕೊಹ್ಲಿಗೆ ಫೀಲ್ಡಿಂಗ್ ವಿಚಾರದಲ್ಲಿ ಧೋನಿ ಸಲಹೆ ನೀಡುತ್ತಿರುವುದು ಸ್ಟಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿದೆ.

ಫೀಲ್ಡಿಂಗ್ ಸೆಟ್ ಮಾಡಲು ಕೊಹ್ಲಿಗೆ ಧೋನಿ ನಿರ್ದೇಶನ ನೀಡುವುದು ಸ್ಪಷ್ಟವಾಗಿ ದಾಖಲಾಗಿದೆ. ಕೇದಾರ್ ಜಾದವ್ ಬೌಲಿಂಗ್ ಮಾಡುತ್ತಿದ್ದಾಗ ಕೊಹ್ಲಿಯನ್ನು ಕರೆದ ಧೋನಿ ‘ಚೀಕೂ.. ಇಲ್ಲಿ 2-3 ಫೀಲ್ಡರ್ ಗಳನ್ನು ನಿಲ್ಲಿಸು’ ಎಂದಿದ್ದರು.

ಇನ್ನೊಂದು ಬಾರಿ ಕೊಹ್ಲಿ ಫೀಲ್ಡಿಂಗ್ ಮತ್ತೊಮ್ಮೆ ಸೆಟ್ ಮಾಡಲು ಹೊರಟಾಗ ‘ಸ್ವಲ್ಪ ತಡಿ. ಇನ್ನೊಂದು ಬಾಲ್ ಹಾಕುವವರೆಗೆ ಕಾಯೋಣ. ಇದಕ್ಕಿಂತ ಮೊದಲು ನಾನು ಹೇಳಿದ ಹಾಗೇ ಇರಲಿ’ ಎಂದು ಧೋನಿ ಕೊಹ್ಲಿಗೆ ನಿರ್ದೇಶನ ನೀಡುತ್ತಿರುವುದು ಸ್ಪಷ್ಟವಾಗಿ ಕೇಳಿಸಿದೆ. ಈ ಬಗ್ಗೆ ಪಂದ್ಯ ನಂತರ ಸ್ಪಿನ್ನರ್ ಯಜುವೇಂದ್ರ ಚಾಹಲ್ ಗೆ ಕೇಳಿದಾಗ ‘ಧೋನಿ ಭಾಯಿ ಈಗಲೂ ನಮ್ಮ ನಾಯಕ’ ಎಂದಿದ್ದಾರೆ.

Comments are closed.