ಕ್ರೀಡೆ

ಮಸಾಜ್‌ ಮಹಿಳೆಗೆ ಜನನಾಂಗ ತೋರಿಸಿಲ್ಲ: ಕ್ರಿಸ್‌ ಗೇಲ್‌

Pinterest LinkedIn Tumblr
West Indies cricketer Chris Gayle

ಸಿಡ್ನಿ: ಮಸಾಜ್‌ ಮಾಡಲು ಬಂದ ಮಹಿಳೆಗೆ ತಮ್ಮ ಜನನಾಂಗವನ್ನು ತೋರಿಸಿದ ಆರೋಪವನ್ನು ವೆಸ್ಟ್‌ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ನಿರಾಕರಿಸಿದ್ದಾರೆ.

2015ರ ಐಸಿಸಿ ವಿಶ್ವಕಪ್‌ ಪಂದ್ಯದ ವೇಳೆ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನ ಡ್ರೆಸಿಂಗ್‌ ರೂಮ್‌ನಲ್ಲಿ ಮಸಾಜ್‌ ಥೆರಪಿಸ್ಟ್‌ಗೆ ತಮ್ಮ ಜನನಾಂಗವನ್ನು ತೋರಿಸಿ ಅನುಚಿತವಾಗಿ ವರ್ತಿಸಿದ್ದರು ಎಂದು ಆಸ್ಪ್ರೇಲಿಯಾದ ಪ್ರಮುಖ ದಿನ ಪತ್ರಿಕೆಗಳಾದ ದಿ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌, ದಿ ಏಜ್‌ ಮತ್ತು ದಿ ಕ್ಯಾನ್‌ಬೆರಾ ಟೈಮ್ಸ್‌ ಕಳೆದ ಜನವರಿಯಲ್ಲಿ ಸರಣಿ ವರದಿಗಳನ್ನು ಪ್ರಕಟಿಸಿದ್ದವು. ಈ ಪತ್ರಿಕೆಗಳ ವಿರುದ್ಧ ಕ್ರಿಸ್‌ ಗೇಲ್‌, ನ್ಯೂ ಸೌತ್‌ ವೇಲ್ಸ್‌ನ ಸುಪ್ರೀಂ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಈ ಕುರಿತ ವಿಚಾರಣೆಯ ಮೊದಲ ದಿನವಾದ ಸೋಮವಾರ ಗೇಲ್‌ ಪರ ವಕೀಲರು ತಮ್ಮ ಕಕ್ಷಿದಾರನ ಹೆಸರಿಗೆ ಮಸಿ ಬಳಿಯುವ ದುರುದ್ದೇಶದಿಂದ ಈ ರೀತಿಯ ವರದಿಗಳನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಸತ್ಯಾಂಶವಿಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.

”ಕ್ರಿಸ್‌ ಹೆಸರಿಗೆ ಮಸಿ ಬಳಿಯುವುದು ಅವರ ಉದ್ದೇಶ. ಅವರು ಕ್ರಿಸ್‌ರನ್ನು ನಾಶ ಮಾಡಲು ಬಯಸಿದ್ದಾರೆ. ಅಂತಹ ಘಟನೆ ನಡೆದೇ ಇಲ್ಲ,” ಎಂದು ಗೇಲ್‌ ಪರ ವಕೀಲ ಬ್ರೂಸ್‌ ಮೆಕ್ಲಿಂಟಾಕ್‌ ಕೋರ್ಟ್‌ ಹೇಳಿರುವುದಾಗಿ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ವರದಿ ಮಾಡಿದೆ.

Comments are closed.