ಕರ್ನಾಟಕ

ಗೌರಿ ಲಂಕೇಶ ಹಂತಕರ ಕ್ಲೂ ಸಿಕ್ಕಿದೆ ಎಂದು ಪುನರುಚ್ಚರಿಸಿದ ಗೃಹ ಸಚಿವ

Pinterest LinkedIn Tumblr


ಯಾದಗಿರಿ: ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಬಗ್ಗೆ ಕ್ಲೂ ಸಿಕ್ಕಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪುನರುಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖಾಧಿಕಾರಿಗಳು ಸ್ವ ಸ್ಥಾನಕ್ಕೆ ಮರಳಿಲ್ಲ. ಮಾಧ್ಯಮಗಳ ವರದಿ ಊಹಾಪೋಹವಾಗಿದ್ದು, ಅಗತ್ಯ ಬಿದ್ದರೇ ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸುತ್ತೇವೆ ಎಂದು ಹೇಳಿದರು.

ಶಂಕಿತರ ರೇಖಾ ಚಿತ್ರದಲ್ಲಿ ಕುಂಕುಮ ಧರಿಸಿರುವ ವ್ಯಕ್ತಿ ವಿಚಾರಕ್ಕೆ ಸ್ಪಷ್ಟನೆ

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಮಾಹಿತಿ ಆಧರಿಸಿ ಎಸ್‌ಐಟಿ ಅಧಿಕಾರಿಗಳು ರೇಖಾ ಚಿತ್ರ ರಚಿಸಿದ್ದಾರೆ. ಅವರು, ಎಡಪಥೀಯ-ಬಲಪಥೀಯ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ಈ ಕುರಿತು ಬಿಜೆಪಿಯವರು ಕೇಳುವ ಪ್ರಶ್ನೆಗೆ ಉತ್ತರಿಸುವ ಅಗತ್ಯಯಿಲ್ಲ ಎಂದು ಸ್ಪಷ್ಟಪಡಿಸಿದರು.

ಕಂಪನಿ ಪರ ಸರಕಾರದ ದಂಡ ಪಾವತಿ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಿಗೆ ರಾಜ್ಯ ಸರಕಾರದ ವಿರುದ್ಧ ಆಪಾದನೆ ಮಾಡುವುದೊಂದೆ ಕೆಲಸ ಎಂದು ಕಿಡಿಕಾರಿದರು.

ಟಿಪ್ಪು ಜಯಂತಿ ವಿಚಾರ…

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಕೆಜೆಪಿಯಲ್ಲಿದ್ದಾಗ ಟಿಪ್ಪು ಧರಿಸಿದ್ದ ಹೋಲಿಕೆಯ ಟೋಪಿ ಧರಿಸಿ, ಕೈಯಲ್ಲಿ ಖಡ್ಗ ಹಿಡಿದಿದ್ದರು. ಆದರೆ, ಈಗ ರಾಜ್ಯ ಸರಕಾರ ಉದ್ದೇಶಿತ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

Comments are closed.