ಕ್ರೀಡೆ

ಶ್ರೀಶಾಂತ್ ಗೆ ಮತ್ತೆ ಎದುರಾದ ಸಂಕಷ್ಟ !

Pinterest LinkedIn Tumblr

ಕೊಚ್ಚಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಅಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಶ್ರೀಶಾಂತ್ ಗೆ ಮತ್ತೆ ಸಂಕಷ್ಟ ಎದುರಾಗಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಶ್ರೀಶಾಂತ್ ಮೇಲಿನ ಅಜೀವ ನಿಷೇಧ ತೆರವಿಗೆ ಕೇರಳ ಹೈಕೋರ್ಟ್ ನ ಏಕಸದಸ್ಯ ಪೀಠ ಆದೇಶಿಸಿತ್ತು. ಈ ಆದೇಶಕ್ಕೆ ಆಕ್ಷೇಪ ಸಲ್ಲಿಸಿ ಬಿಸಿಸಿಐ ಅರ್ಜಿ ಸಲ್ಲಿಸಿತ್ತು. ಇಂದು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನ ವಿಭಾಗೀಯ ಪೀಠ ಬಿಸಿಸಿಐನ ಮನವಿಯನ್ನು ಎತ್ತಿಹಿಡಿದಿದ್ದು ಶ್ರೀಶಾಂತ್ ಮೇಲಿನ ಅಜೀವ ನಿಷೇಧ ತೆರವಿಗೆ ತಡೆ ನೀಡಿದೆ.

ಬಿಸಿಸಿಐ ಹೇರಿರುವ ಅಜೀವ ನಿಷೇಧದ ಬಗ್ಗೆ ನ್ಯಾಯಾಂಗ ವಿಮರ್ಶೆಯನ್ನು ನ್ಯಾಯಾಲಯ ನಡೆಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕೇರಳ ಹೈಕೋರ್ಟ್ ನ ವಿಭಾಗೀಯ ಪೀಠದ ನ್ಯಾಯಮೂರ್ತಿ ನವನೀತಿ ಪ್ರಸಾದ್ ಸಿಂಗ್ ಅವರು ಬಿಸಿಸಿಐನ ಮನವಿಯನ್ನು ಎತ್ತಿಹಿಡಿದಿದ್ದಾರೆ.

ಹೈಕೋರ್ಟ್ ತಡೆ ಹಿನ್ನೆಲೆ ಶ್ರೀಶಾಂತ್ ಕೇರಳ ಪರ ರಣಜಿ ಪಂದ್ಯಗಳು ಸೇರಿದಂತೆ ಬಿಸಿಸಿಐನ ಅಧೀನಕ್ಕೆ ಬರುವ ಯಾವುದೇ ಪಂದ್ಯಗಳಲ್ಲಿ ಆಡುವಂತಿಲ್ಲ.

ಹೈಕೋರ್ಟ್ ತಡೆ ಬಳಿಕ ಮಾತನಾಡಿದ ಕೇರಳ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಜಯೇಶ್ ಜಾರ್ಜ್, ಶ್ರೀಶಾಂತ್ ನಿಷೇಧ ತೆರವಿನ ನಂತರ ತಾವು ಸಂಪೂರ್ಣವಾಗಿ ಶ್ರೀಶಾಂತ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

Comments are closed.