ಕ್ರೀಡೆ

ಮೈದಾನದಲ್ಲೇ ಫುಟ್ಬಾಲ್ ಆಟಗಾರನ ದುರಂತ ಸಾವು

Pinterest LinkedIn Tumblr


ಹೊಸದಿಲ್ಲಿ: ಅತ್ಯಂತ ಆಘಾತಕಾರಿ ಸುದ್ದಿಯೊಂದರಲ್ಲಿ ಫುಟ್ಬಾಲ್ ಮೈದಾನದಲ್ಲೇ ಆಡುತ್ತಿರುವಾಗ ಆಟಗಾರನೋರ್ವ ದುರಂತ ಸಾವಿಗೀಡಾದ ಘಟನೆ ಇಂಡೋನೇಷ್ಯಾದಿಂದ ವರದಿಯಾಗಿದೆ.

ಇಂಡೋನೇಷ್ಯಾ ಕ್ಲಬ್ ಗೋಲು ಕೀಪರ್ ಕೊಯಿರುಲ್ ಹುಡಾ (Choirul Huda) ಎಂಬವರೇ ಮೃತ ದುರ್ದೈವಿ. ಗೋಲು ತಡೆಯುವ ಯತ್ನದ ವೇಳೆ ಎದುರಾಳಿ ತಂಡದ ಆಕ್ರಮಣವನ್ನು ತಡೆಯುವ ಯತ್ನದಲ್ಲಿದ್ದ ತಮ್ಮದೇ ತಂಡದ ಆಟಗಾರ ರಮನ್ ರೊಡ್ರಿಗಸ್ ಜತೆ ಬಲವಾಗಿ ಢಿಕ್ಕಿ ಹೊಡೆದಿರುವುದೇ ಸಾವನ್ನಪ್ಪಲು ಕಾರಣವಾಗಿದೆ.

ಭಾನುವಾರ ಪೆರ್ಸೆಲಾ ಲಮಾಂಗನ್ ಮತ್ತು ಸೆಮೆನ್ ಪೆಡಾಂಗ್ ನಡುವಣ ಪಂದ್ಯದಲ್ಲಿ ಘಟನೆ ನಡೆದಿತ್ತು.

ತಲೆಗೆ ಢಿಕ್ಕಿ ಹೊಡೆದ ರಭಸಕ್ಕೆ 38ರ ಹರೆಯದ ಗೋಲು ಕೀಪರ್ ಕುಸಿದು ಬಿದ್ದಿದ್ದರು. ತಕ್ಷಣವೇ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಯಾಗುವಾಗ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

Comments are closed.