ಅಂತರಾಷ್ಟ್ರೀಯ

ಅಫ್ಘಾನ್‌ ಮಸೀದಿ ಫೋಟೋ ಪ್ರಕಟಿಸಿ ಪಾಕ್‌ ಮತ್ತೆ ಪೇಚಿಗೆ!

Pinterest LinkedIn Tumblr


ಇಸ್ಲಮಬಾದ್‌ : ವಿಶ್ವಸಂಸ್ಥೆ ವೇದಿಕೆಯಲ್ಲಿ ಕಾಶ್ಮೀರದ್ದು ಎಂದು ಗಾಜಾದ ಸಂತ್ರಸ್ತ ತರುಣಿಯ ಫೋಟೋ ತೋರಿಸಿ ಮಾನ ಹರಾಜು ಹಾಕಿಕೊಂಡಿದ್ದ ಪಾಕಿಸ್ಥಾನ ಮತ್ತೆ ಎಡವಟ್ಟು ಮಾಡಿಕೊಂಡಿದ್ದು ಅಫ್ಘಾನಿಸ್ಥಾನದ ಮಸೀದಿ ಪೋಟೋ ತೋರಿಸಿ ತನ್ನದೆಂದು ಹೇಳಿ ಸಾಮಾಜಿಕ ತಾಣದಲ್ಲಿ ನಗೆಪಾಟಲಿಗೀಡಾಗಿದೆ.

ಪ್ರವಾಸೋಧ್ಯಮ ಅಭಿವೃದ್ಧಿ ಮಾಡಲು ಹೊರಟಿರುವ ಪಾಕ್‌ ಸರ್ಕಾರದ ಅಧಿಕೃತ ಟ್ವೀಟರ್‌ನಲ್ಲಿ ಪ್ರಕಟಿಸಿದ ವಿಡಿಯೋದಲ್ಲಿ ಅಫ್ಘಾನ್‌ನ ಹಜರತ್‌ ಅಲಿ ಮಸೀದಿಯ ಚಿತ್ರ ಪ್ರಕಟಿಸಿ ಇದು ನಮ್ಮ ಪರಂಪರೆಯ ಸಂಸ್ಕೃತಿ ಎಂದು ಬಿಂಬಿಸಿತ್ತು. ಈ ವಿಡಿಯೋ ವೀಕ್ಷಿಸಿದ ಜನರು ತೀವ್ರ ಟೀಕೆಗಳ ಮಳೆ ಸುರಿಸಿದ್ದಾರೆ.

ಯಡವಟ್ಟು ಗಮನಕ್ಕೆ ಬರುತ್ತಿದ್ದಂತೆ ವಿಡಿಯೋವನ್ನೇ ಟ್ವೀಟರ್‌ನಿಂದ ಡಿಲೀಟ್‌ ಮಾಡಲಾಗಿದೆ.

-ಉದಯವಾಣಿ

Comments are closed.