ಕ್ರೀಡೆ

ಮಗಳ ಹುಟ್ಟುಹಬ್ಬ ಆಚರಿಸಿದ ದೋನಿ

Pinterest LinkedIn Tumblr


ಮಸೂರಿ : ಭಾರತದ ಮಾಜಿ ಕ್ಯಾಪ್ಟನ್‌ ಕೂಲ್‌ ಎಂ.ಎಸ್‌. ದೋನಿ ಅವರ ಮಗಳು ಝಿವಾ ಅವರ ಎರಡನೇ ಹುಟ್ಟುಹಬ್ಬ ಆಚರಿಸಲು ಉತ್ತರಾಖಂಡದ ಮಸೂರಿ ಗಿರಿಧಾಮಕ್ಕೆ ತೆರಳಿದ್ದಾರೆ.

ದೋನಿಯವರ ತಂದೆ ಪಾನ್‌ಸಿಂಗ್‌ ಅವರು ಮೂಲತಃ ಉತ್ತರಾಖಂಡ ರಾಜ್ಯದವರಾಗಿದ್ದಾರೆ. ಕುಟುಂಬದ ಜತೆ ಸಮಯ ಕಳೆಯಲು ದೋನಿ ಬಿಡುವಿನ ದಿನಗಳಲ್ಲಿ ಮಸೂರಿಗೆ ಬಂದು ಬಿಡಾರ ಹೂಡುತ್ತಾರೆ. ಅಲ್ಲದೇ ದೋನಿಯವರ ವಿವಾಹವೂ ಡೆಹ್ರಾಡೂನ್‌ ಸಮೀಪವೇ ಜರುಗಿತ್ತು.

ಸ್ನೇಹಿತರು ಹಾಗೂ ಕುಟುಂಬದವರೊಡನೆ ಭಾನುವಾರವೇ ಮಸೂರಿಗೆ ಆಗಮಿಸಿರುವ ದೋನಿ ಇಂದು ಮಗಳ ಹುಟ್ಟುಹಬ್ಬ ಆಚರಣೆಯಲ್ಲಿ ಸಕ್ರೀಯವಾಗಿದ್ದಾರೆ. ದೋನಿ ಅವರ ಪತ್ನಿ ಸಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬ ಆಚರಣೆಯ ಮತ್ತು ಮಗಳು ಝಿವಾ ಅವರ ಭಾವಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ.

Comments are closed.