ಕರ್ನಾಟಕ

ಚಿನ್ನಾಭರಣ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಆಂಧ್ರದ ಕಳ್ಳಿಯರ ಬಂಧನ

Pinterest LinkedIn Tumblr


ಬೆಂಗಳೂರು,ಫೆ.೬-ಚಿನ್ನಾಭರಣ ಅಂಗಡಿಗಳಲ್ಲಿ ಖರೀದಿಯ ನೆಪದಲ್ಲಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರ ಮೂಲದ ಮೂವರು ಖತರ್ನಾಕ್ ಕಳ್ಳಿಯರನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಕಲಾ(೪೫)ಲಲಿತಾ(೪೦)ಹಾಗೂ ರತ್ನ (೪೦) ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ ೯೨ ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಸವನಗುಡಿಯ ಸಾಯಿ ಗೋಲ್ಡ್ ಪ್ಯಾಲೇಸ್,ಜಯನಗರದ ಪಿಸಿ ಜ್ಯೂವೆಲರಿ, ಹಾಗೂ ವಿ.ಬಿ.ಜೆ ಜ್ಯೂವೆಲರಿಯಲ್ಲಿ ಚಿನ್ನಾಭರಣಗಳನ್ನು ಖರೀದಿಯ ನೆಪದಲ್ಲಿ ಕಳವು ಮಾಡಿದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬಸವನಗುಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.
ಗಾಂಜಾ ಮೂವರ ಸೆರೆ
ಬಸವನಗುಡಿಯ ಸರ್ಕಾರಿ ಶಾಲೆಯ (ಟಿನ್ ಸ್ಕೂಲ್) ನಿರ್ಮಾಣ ಹಂತದ ಕಟ್ಟಡದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಇಸಿರುವ ಬಸವನಗುಡಿ ಪೊಲೀಸರು ೩೫ ಸಾವಿರ ಬೆಲೆಯ ೧,೯೦೦ ಗ್ರಾಂ ಗಾಂಜಾ, ಮೂರು ಮೊಬೈಲ್‌ಗಳು ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಸವನಗುಡಿಯ ಸೈಯದ್ ಅಮಾನುಲ್ಲಾ(೫೪) ಹಿದಾಯತ್ ಪಾಷಾ ಅಲಿಯಾಸ್ ಖಲೀಲ್(೩೩)ಹಾಗೂ ಶಂಭಯ್ಯ (೫೫)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಶರಣಪ್ಪ ತಿಳಿಸಿದ್ದಾರೆ.

Comments are closed.