ಮನೋರಂಜನೆ

ಕನ್ನಡ ಚಿತ್ರರಂಗದ ಬದಲಾವಣೆ ಓಟಕ್ಕೆ ಮತ್ತೊಂದು ಚಿತ್ರ ಸೇರ್ಪಡೆ ‘ಶುದ್ಧಿ’ ಟ್ರೇಲರ್‌

Pinterest LinkedIn Tumblr


ಬೆಂಗಳೂರು: ಕನ್ನಡ ಚಿತ್ರರಂಗದ ಬದಲಾವಣೆ ಓಟಕ್ಕೆ ಮತ್ತೊಂದು ಚಿತ್ರ ಸೇರ್ಪಡೆಯಾಗುವ ಸೂಚನೆ ಕಾಣುತ್ತಿದೆ. ಟ್ರೇಲರ್‌ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ‘ಶುದ್ಧಿ’ ಸದ್ದು ಮಾಡುತ್ತಿದೆ.

ಫೆ.3ರಂದು ಬಿಡುಗಡೆಯಾಗಿರುವ ಶುದ್ಧಿ ಚಿತ್ರದ ಟ್ರೇಲರ್‌ 1.65 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಾಣುವ ಮೂಲಕ ಯೂಟ್ಯೂಬ್‌ ಟ್ರೆಂಡಿಂಗ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಎಳೆಯಿರುವ ಸಿನಿಮಾ, ಭಿನ್ನ ಟ್ರೇಲರ್‌ ಮೂಲಕ ಗಮನ ಸೆಳೆಯುತ್ತಿದೆ. ಕಾನೂನು ಹೋರಾಟದಲ್ಲಿ ತೊಡಗಿರುವ ಮಹಿಳಾ ಪತ್ರಕರ್ತರು ಹಾಗೂ ಭಾರತದ ಪ್ರವಾಸದಲ್ಲಿರುವ ಅಮೆರಿಕ ಮೂಲದ ಮಹಿಳೆ ಇಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.

ಜೆಸ್ಸಿ ಕ್ಲಿಂಟನ್‌ ಸಂಗೀತ, ಆ್ಯಂಡ್ರೂ ಇಲೋ ಛಾಯಾಗ್ರಹಣ ಹಾಗೂ ಆದರ್ಶ್‌ ಎಚ್‌.ಈಶ್ವರಪ್ಪ ಅವರ ನಿರ್ದೇಶನವಿದೆ.

ನಿವೇದಿತಾ, ಲಾರೆನ್‌ ಸ್ಪಾರ್ಟೆನೋ ಹಾಗೂ ಅಮೃತಾ ಕರಗಡ ಪ್ರಮುಖ ಪಾತ್ರವಹಿಸಿದ್ದಾರೆ.

Comments are closed.