ಕ್ರೀಡೆ

ನನ್ನ’ ಯಶಸ್ಸಿಗೆ ‘ದೋನಿ’ ತಂತ್ರಗಳೇ ಕಾರಣ: ವಿರಾಟ್ ಕೊಹ್ಲಿ

Pinterest LinkedIn Tumblr


ಬೆಂಗಳೂರು: ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಮೂರೂ ಮಾದರಿಗಳಲ್ಲಿ ನಾಯಕರಾಗಿ ಸರಣಿ ಗೆದ್ದು ಸಾಧನೆ ಮಾಡಿರುವ ವಿರಾಟ್ ಕೊಹ್ಲಿಯ ಯಶಸ್ಸಿನ ಹಿಂದೆ ಇರುವುದು ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿಯ ಕಾರ್ಯ ತಂತ್ರ!

ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯನ್ನು 2–1ರಲ್ಲಿ ಗೆದ್ದುಕೊಂಡ ನಂತರ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಮಹೇಂದ್ರ ಸಿಂಗ್ ದೋನಿ ಮತ್ತು ಆಶಿಶ್ ನೆಹ್ರಾ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದು, ಅದನ್ನು ನಾನು ಪಾಲಿಸಿದ್ದೇನೆ. ನಾನು ನನ್ನ ಮನಸ್ಸು ಹೇಳಿದಂತೆ ತೀರ್ಮಾನ ತೆಗೆದುಕೊಳ್ಳುತ್ತೇನೆ. ಈಗಲೂ ನಾನು ದೋನಿ ಮತ್ತು ನೆಹ್ರಾ ಅವರ ಸಲಹೆ ಪಡೆದುಕೊಳ್ಳುತ್ತೇನೆ.

Comments are closed.