ಅಂತರಾಷ್ಟ್ರೀಯ

ಹಿಜಾಬ್‌ ಧರಿಸಿದ ಮಹಿಳಾ ಮುಸ್ಲಿಂ ಪೊಲೀಸ್ ಗೆ ನಿಂದನೆ

Pinterest LinkedIn Tumblr


ನ್ಯೂಯಾರ್ಕ್‌: ಹಿಜಾಬ್‌ (ಬುರ್ಖಾ) ಧರಿಸಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮುಸ್ಲಿಂ ಧರ್ಮದ ಮಹಿಳಾ ಪೊಲೀಸ್‌ ಸಿಬ್ಬಂದಿ ಮೇಲೆ ಹಿರಿಯ ಅಧಿಕಾರಿಗಳು ದೌರ್ಜನ್ಯ ನಡೆಸಿ ಆಕೆಗೆ ನಿಂದಿಸಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 38 ವರ್ಷದ ಡಾನಿಎಲ್ಲಿ ಆಲಂರಾಣಿಗೆ ಹಿರಿಯ ಅಧಿಕಾರಿಗಳು ಭಯೋತ್ಪಾದಕಿ, ತಾಲಿಬಾನಿ ಎಂದು ನಿಂದಿಸಿದ್ದಾರೆ ಎಂದು ಅವರು ಸಲ್ಲಿಸಿರುವ ದೂರಿನಲ್ಲಿ ದಾಖಲಿಸಿದ್ದಾರೆ.

2006 ರಿಂದ ಸೇವೆಯಲ್ಲಿರುವ ಆಲಂರಾಣಿಯವರು 2007ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ಪ್ರಕರಣಕ್ಕೂ ಮೊದಲು 2012 ರಲ್ಲಿ ಇಬ್ಬರು ಹಿರಿಯ ಅಧಿಕಾರಿಗಳಿಂದ ಹಲ್ಲೆ ನಡೆದಿತ್ತು. ಈ ಕುರಿತು ಮ್ಯಾನ್‌ ಹಟ್ಟನ್‌ ಕೋರ್ಟ್‌ನಲ್ಲಿ ಮೊಕದ್ದಮೆ ನಡೆದಿತ್ತು.

ನಂತರ 2015ರಲ್ಲಿ ಮತ್ತೆ ತಮ್ಮ ವಿರುದ್ಧ ಇದೇ ಮಾದರಿ ಹಲ್ಲೆ ನಡೆಯಿತು. ಅದರ ಕಿರುಕುಳದ ದೃಶ್ಯಾವಳಿಗಳು ತಮ್ಮ ಬಳಿ ಇದ್ದು, ಅದರಲ್ಲಿ ಅವಾಚ್ಯ ಪದಗಳಿಂದ ನಿಂದಿಸಿರುವುದು ದಾಖಲಾಗಿದೆ ಎಂದಿದ್ದಾರೆ. ಆಲಂರಾಣಿ ಪರ ವಕೀಲರಾದ ಜೆಸ್ಸಿ ಕರ್ಟಿಸ್‌ ರೋಸ್‌ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಕಕ್ಷಿದಾರಳ ಪರ ಹೋರಾಟ ನಡೆಸಿದ್ದಾರೆ.

Comments are closed.