ರಾಷ್ಟ್ರೀಯ

ಕಳಪೆ ಆಹಾರ ಆರೋಪಿ ಮಾಡಿದ್ದ ಯೋಧನಿಗೆ ಗೃಹ ಬಂಧನ: ಯೋಧನ ಪತ್ನಿ ಆರೋಪ

Pinterest LinkedIn Tumblr


ನವದೆಹಲಿ: ಬಿಎಸ್‌ಎಫ್‌ (ಗಡಿ ಭದ್ರತಾ ಪಡೆ) ಯೋಧ ತೇಜ್‌ ಬಹದ್ದೂರ್ ಯಾದವ್ ಅವರನ್ನು ಸೇನೆ ಗೃಹ ಬಂಧನದಲ್ಲಿರಿಸಿದೆ ಮತ್ತು ಮಾನಸಿಕ ಕಿರುಕುಳ ನೀಡುತ್ತದೆ ಎಂದು ಅವರ ಪತ್ನಿ ಶರ್ಮಿಳಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಗಡಿಯಲ್ಲಿ ದೇಶ ರಕ್ಷಣೆಗೆ ನಿರತರಾಗಿರುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ ಎಂದು ಆರೋಪಿಸಿ ಕಳೆದ ತಿಂಗಳು ತೇಜ್‌ ಬಹದ್ದೂರ್ ವಿಡಿಯೊ ಬಿಡುಗಡೆ ಮಾಡಿದ್ದರು. ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದ ಆ ವಿಡಿಯೊಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿತ್ತು.

‘ಜನವರಿ 31 ರಂದು ಮನೆಗೆ ಆಗಮಿಸುವ ನಿರೀಕ್ಷೆ ಇತ್ತು. ಆದರೆ ಅವರು ಬರಲಿಲ್ಲ. ಇಂದು ಬೇರೊಬ್ಬರ ಫೋನಿನಿಂದ ಕರೆ ಮಾಡಿ, ಗೃಹ ಬಂಧನದಲ್ಲಿರಿಸಿದ್ದಾರೆ, ಮಾನಸಿಕ ಹಿಂಸೆಯಾಗುತ್ತಿದೆ. ಅಲ್ಲದೇ ಅವಧಿ ಪೂರ್ವ ನಿವೃತ್ತಿಗಾಗಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದಾರೆ ಎಂದು ತೇಜ್‌ ಬಹದ್ದೂರ್ ಅವತ್ತುಕೊಂಡಿದ್ದಾರೆ’ ಎಂದು ಅವರ ಪತ್ನಿ ಶರ್ಮಿಳಾ ಸುದ್ದಿ ಮಾಧ್ಯಮ ‘ಎಎನ್‌ಐ’ ಗೆ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸೇನೆ ತೇಜ್‌ ಬಹಾದೂರ್‌ ಅವರನ್ನು ಬಂಧಿಸಿಲ್ಲ, ಸೇನೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಎನ್‌ಐಗೆ ತಿಳಿಸಿದೆ.

Comments are closed.