ರಾಷ್ಟ್ರೀಯ

ಪ್ರೀತಿಗೆ ನಿರಾಕರಿಸಿದ ವೈದ್ಯಕೀಯ ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡ ವೈದ್ಯಕೀಯ ವಿದ್ಯಾರ್ಥಿ

Pinterest LinkedIn Tumblr


ಕೋಟ್ಟಯಂ: ಪ್ರೀತಿಸಲು ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ ಕೊಂದ ಯುವಕನೋರ್ವ ತಾನೂ ಬೆಂಕಿ ಹಚ್ಚಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೋಟ್ಟಯಂನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಸಂಭವಿಸಿದೆ.

ಪೆಟ್ರೋಲ್‌ ತುಂಬಿದ್ದ ಬಾಟಲಿ ಹಿಡಿದು ಯುವತಿಯ ತರಗತಿಗೆ ನುಗ್ಗಿದ ಯುವಕ, ರಕ್ಷಣೆಗೆ ಧಾವಿಸಿದ ಆಕೆಯ ಸಹಪಾಠಿಗಳ ತಡೆಯನ್ನು ಮೀರಿ ಈ ಕೃತ್ಯವೆಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ಮಾಡಿದ ಯುವಕ ಅದೇ ಕಾಲೇಜಿನಲ್ಲೇ ಎರಡು ವರ್ಷಗಳ ಹಿಂದೆ ವೈದ್ಯಕೀಯ ಶಿಕ್ಷಣ ಪಡೆದಿದ್ದ. ಫಿಸಿಯೋಥೆರೆಪಿ ವಿಷಯದ ನಾಲ್ಕನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂತ್ರಸ್ಥ ವಿದ್ಯಾರ್ಥಿನಿಯನ್ನು ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾಳೆ. ಆಕೆಯನ್ನು ರಕ್ಷಿಸಲು ಧಾವಿಸಿದ ಇಬ್ಬರು ಸಹಪಾಠಿಗಳಿಗೂ ಸಣ್ಣ ಪ್ರಮಾಣದ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರೂ ಕೆಲ ತಿಂಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಆಕೆಯ ಮನೆಯಲ್ಲಿ ವಿರೋಧ ವ್ಯಕ್ತವಾದ ಕಾರಣ ಆತನಿಂದ ಅಂತರ ಕಾಯ್ದುಕೊಂಡಿದ್ದಳು, ಆದರೂ ದಾಳಿ ಮಾಡಿದ್ದ ಯುವಕ ಆಕೆಯನ್ನು ಒತ್ತಾಯ ಪಡಿಸಲಾರಂಭಿಸಿದ್ದ. ಕೆಲವು ಬಾರಿ ಬೆದರಿಕೆಯನ್ನೂ ಹಾಕಿದ್ದ ಎಂದು ಸಂತ್ರಸ್ಥೆಯ ಸ್ನೇಹಿತರು ಮಾಹಿತಿ ನೀಡಿದ್ದಾರೆ.

ದಾಳಿಮಾಡಿ ಆತ್ಮ ಹತ್ಯೆ ಮಾಡಿಕೊಂಡ ಯುವಕ ಆದರ್ಶ್‌(25) ಕೊಲ್ಲಂ ಮೂಲದವನೆಂದು ತಿಳಿದು ಬಂದಿದೆ.

Comments are closed.