ಕ್ರೀಡೆ

ಕ್ರಿಕೆಟ್ ಹಾಗೂ ಚೆಸ್ ಎರಡರಲ್ಲಿಯೂ ಯಶಸ್ವಿ ಏಕೈಕ ಆಟಗಾರ ಚಹಾಲ್

Pinterest LinkedIn Tumblr


ನವದೆಹಿಲಿ, ಫೆ ೨- ಆತ ವಿಶ್ವನಾಥನ್ ಆನಂದ್ ರೀತಿ ಚೆಸ್ ಮಾಂತ್ರಿಕನಾಗಬೇಕು ಅಂತ ಅಂದುಕೊಂಡಿದ್ದ. ಆದರೆ, ಟೀಮ್ ಇಂಡಿಯಾದ ವಿಶ್ವಕಪ್ ಗೆಲುವು ಆತನನ್ನು ಕ್ರಿಕೆಟ್’ನತ್ತ ಒಲವು ಮೂಡುವಂತೆ ಮಾಡಿತ್ತು. ಐಪಿಎಲ್‌ನಲ್ಲಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಯುಜುವೇಂದ್ರ ಚಹಾಲ್ ದೇಶದಲ್ಲಿ ಕ್ರಿಕೆಟ್ ಹಾಗೂ ಚೆಸ್ ಎರಡರಲ್ಲಿಯೂ ಯಶಸ್ವಿಯಾದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಅನುಭವಿ ಆಟಗಾರರು ಅಪಾಯದ ಸಮಯದಲ್ಲಿ ಸೀರಿಸ್ ಗೆದ್ದುಕೊಡುವುದು ಸಾಮಾನ್ಯ ಆದರೆ, ಡೆಬ್ಯೂ ಆಟಗಾರನೊಬ್ಬ ಸರಣಿ ಗೆದ್ದುಕೊಡುವುದೆಂದರೆ ಸಾಮಾನ್ಯವಾದ ವಿಷಯವಲ್ಲ. ಆ ಅಸಾಮಾನ್ಯನೇ ಐಪಿಎಲ್ ಹೀರೋ, ಆರ್‌ಸಿಬಿಗೆ ಬೌಲಿಂಗ್ ಬಲ ತುಂಬಿದ. ಜಿಂಬಾಬ್ವೆ ವಿರುದ್ಧದ ಟೀಮ್ ಇಂಡಿಯಾ ಗೆಲುವಿನ ರೂವಾರಿಯಾಗಿದ್ದ ಯುವ ಸ್ಪಿನ್ನರ್ ಯುಜುವೇಂದ್ರ ಚಹಾಲ್, ಎರಡು ಆಟದಲ್ಲಿ ಚಾಂಪಿಯನ್ ಎಂದರೆ ತಪ್ಪಗಲಾರದು. ಅಲ್ಲದೇ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಟಿ೨೦ ಕ್ರಿಕೆಟ್‌ನಲ್ಲಿ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ ಗಳಿಸಿದ್ದು ಮತ್ತೊಂದು ಹಿರಿಮೆ ಎನ್ನಬಹದು.
ಚಹಾಲ್ ಚೆಸ್ ಹಾಗೂ ಕ್ರಿಕೆಟ್ ಎರಡನ್ನೂ ಒಟ್ಟೊಟ್ಟಿಗೆ ಆಡ್ಕೊಂಡು ಬಂದವರು. ವಿಶ್ವನಾಥನ್ ಆನಂದ್ ರೀತಿ ಚೆಸ್’ನಲ್ಲಿ ಸಾಧನೆ ಮಾಡಬೇಕು ಎನ್ನುವ ಕನಸನ್ನು ಹೊತ್ತಿದ್ದವರು. ಬುದ್ದಿವಂತರ ಗೇಮ್ ಬಿಟ್ಟು ಬಂದ ಚಹಾಲ್‌ಗೆ ಕ್ರಿಕೆಟ್’ನಲ್ಲಿ ಚದುರಂಗ ಸಾಕಷ್ಟು ನೆರವಾಗಿ ಬರ್ತಿದೆಯಂತೆ. ಚಹಾಲ್ ಆಡಿದ್ದು ಟೀಮ್ ಇಂಡಿಯಾದ ಯಶಸ್ವಿ ನಾಯಕ ಧೋನಿ ನೇತೃತ್ವದಲ್ಲಿ. ತನ್ನ ಚೊಚ್ಚಲ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದ ಸ್ಪಿನ್ನರ್, ೨ನೇ ಪಂದ್ಯದ ಮ್ಯಾಚ್ ವಿನ್ನರ್ ಎನಿಸಿಕೊಂಡರು.
ಹರ್ಯಾಣ ಮೂಲದ ಚಾಹಲ್ ಆರ್‌ಸಿಬಿ ತೆಕ್ಕೆಗೆ ಬಿದ್ದದ್ದು ೨೦೧೪ರಲ್ಲಿ. ಅಂದು ಅವರಿಗೆ ಲಭಿಸಿದ ಮೊತ್ತ ಕೇವಲ ೧೦ ಲಕ್ಷ ರೂ. ಇಷ್ಟು ಕಡಿಮೆ ಮೊತ್ತಕ್ಕೆ ಮಾರಾಟವಾದ ಕ್ರಿಕೆಟಿಗನೋರ್ವ ೨ ವರ್ಷಗಳ ಬಳಿಕ ಆರ್‌ಸಿಬಿಯ ಸ್ಟಾರ್ ಬೌಲರ್ ಆಗಿ ಕಾಣಿಸಿಕೊಳ್ಳುತ್ತಾರೆಂದು ಬಹುಶಃ ಯಾರೂ ಭಾವಿಸಿರಲಿಲ್ಲ.
ಯಜುವೇಂದ್ರ ಚಾಹಲ್ ಅವರ ಮೊದಲ ಕ್ರೀಡಾ ನಡೆ ಚೆಸ್‌ನಿಂದ ಆರಂಭವಾಗಿ ಜೂನಿಯರ್ ಇಂಟರ್ ನ್ಯಾಶನಲ್ ಚೆಸ್ ಆಟಗಾರನಾಗಿ ಅವರು ಗಮನ ಸೆಳೆದಿದ್ದರು. ಗ್ರೀಸ್‌ನಲ್ಲಿ ನಡೆದ ೨೦೦೩ರ ಏಶ್ಯನ್ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಅಂಡರ್-೧೨ ವಿಭಾಗದಲ್ಲಿ ಪ್ರತಿನಿಧಿಸಿದ ಹಿರಿಮೆ ಚಾಹಲ್ ಅವರದು. ಹಾಗೂ ಅಂಡರ್ ೧೬ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲೂ ತಂಡವನ್ನು ಪ್ರತಿನಿಧಿಸಿದ್ದಾರೆ.

Comments are closed.