ಕ್ರೀಡೆ

ಅಜರುದ್ದೀನ್ ನಾಮಪತ್ರ ತಿರಸ್ಕೃತ

Pinterest LinkedIn Tumblr


ಹೈದರಾಬಾದ್(ಜ.14): ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿ ಸಲ್ಲಿಸಿದ್ದ ನಾಮಪತ್ರ ತಿಸ್ಕೃತಗೊಂಡಿದೆ.
2000ದ ದ.ಆಫ್ರಿಕಾ ವಿರುದ್ಧದ ಸರಣಿಯ ವೇಳೆ ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ಆಜೀವ ನಿಷೇಧಕ್ಕೆ ಗುರಿಯಾಗಿದ್ದ ಅವರ ಮೇಲಿನ ನಿಷೇಧವನ್ನು ಹೈದರಾಬಾದ್ ಉಚ್ಚ ನ್ಯಾಯಾಲಯ ರದ್ದುಗೊಳಿಸಿದ್ದರೂ, ಬಿಸಿಸಿಐ ನಿಷೇಧವನ್ನು ಹಿಂಪಡೆದಿರುವ ಬಗ್ಗೆ ಯಾವುದೇ ಸ್ಪಷ್ಟನೆ ಹೊರಬಂದಿಲ್ಲ.
ಅಜರ್ ಈ ಕುರಿತಂತೆ ಪತ್ರ ಬರೆದು ಕೋರಿದರೂ, ಬಿಸಿಸಿಐನಿಂದ ಯಾವುದೇ ಸ್ಪಷ್ಟನೆ ಬಾರದ ಹಿನ್ನೆಲೆಯಲ್ಲಿ ರಿಟರ್ನಿಂಗ್ ಆಫೀಸರ್ ಕೆ. ರಾಜೀವ್ ರೆಡ್ಡಿ ನಾಮಪತ್ರ ತಿರಸ್ಕರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
1992, 1996, 1999ರ ವಿಶ್ವಕಪ್‌ನಲ್ಲಿ ಅಜರ್ ಭಾರತವನ್ನು ಮುನ್ನಡೆಸಿದ್ದರು.

Comments are closed.