ಕ್ರೀಡೆ

ಪಾಕಿಸ್ತಾನ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಿಖ್ ಸಮುದಾಯದ ಮೊದಲ ಆಟಗಾರ ! ಈತ ಯಾರು ಗೊತ್ತಾ..?

Pinterest LinkedIn Tumblr

mahinder-pal-singh

ಇಸ್ಲಾಮಾಬಾದ್: ಪಾಕಿಸ್ತಾನ ತಂಡದಲ್ಲಿ ಇದೇ ಮೊದಲ ಬಾರಿಗೆ ಸಿಖ್ ಸಮುದಾಯದ ಆಟಗಾರನೊಬ್ಬ ಸ್ಥಾನ ಪಡೆದಿದ್ದಾನೆ.

ಪಾಕಿಸ್ತಾನ ತಂಡದಲ್ಲಿ ಮುಸ್ಲಿಮೇತರ ಆಟಗಾರರು ಸ್ಥಾನ ಪಡೆಯುವುದು ಅಪರೂಪವಾದರೂ ಈ ಹಿಂದೆ ದನೀಶ್ ಕನೇರಿಯಾ ಎಂಬ ಹಿಂದೂ ಆಟಗಾರ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ. ಆ ಮೂಲಕ ಪಾಕ್ ತಂಡದಲ್ಲಿರುವ ಏಕೈಕ ಹಿಂದೂ ಆಟಗಾರ ಎಂಬ ಖ್ಯಾತಿ ಗಳಿಸಿದ್ದರು. ಅದೇ ರೀತಿ ಇದೀಗ ಪಾಕಿಸ್ತಾನ ತಂಡದ ಪರ ಇದೇ ಮೊದಲ ಬಾರಿಗೆ ಸಿಖ್ ಮೂಲದ ಆಟಗಾರನೊಬ್ಬ ಸ್ಥಾನಗಳಿಸಿದ್ದಾನೆ.

ಪಂಜಾಬ್ ಮೂಲಕ ಮಹಿಂದರ್ ಪಾಲ್ ಸಿಂಗ್ ಅಲಿಯಾಸ್ ಮಹಿಪಾಲ್ ಸಿಂಗ್ ಎಂಬ ಉದಯೋನ್ಮುಖ ಆಟಗಾರ ಪಾಕಿಸ್ತಾನ ಕ್ರಿಕೆಟ್ ತಂಡದ ಆಡುವ 30 ಆಟಗಾರರ ಪಟ್ಟಿಗೆ ಆಯ್ಕೆಯಾಗಿದ್ದು, ತಂಡದಲ್ಲಿ ಸ್ಥಾನ ಖಚಿತ ಪಡಿಸಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ. ಮಹಿಪಾಲ್ ಸಿಂಗ್ ಸಿಖ್ ಸಮುದಾಯದವರೇ ಆದರೂ ಕ್ರಿಕೆಟ್ ಮೇಲಿನ ಹುಚ್ಚು ಅವರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಆಡುವಂತೆ ಮಾಡಿದೆ. ಪಾಕಿಸ್ತಾನದ ಕ್ರಿಕೆಟ್ ದಂತಕಥೆ ವಕಾರ್ ಯೂನಿಸ್ ಅವರಂತೆ ಬೆಳೆಯಬೇಕು ಎನ್ನುವುದು ಮಹಿಪಾಲ್ ಸಿಂಗ್ ಅವರ ಆಸೆಯಂತೆ. ಇದೇ ಕಾರಣಕ್ಕೆ ಕಠಿಣ ತಾಲೀಮು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಖಂಡಿತಾ ಪಾಕಿಸ್ತಾನ ಅಂತಾರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಸಿಖ್ ಸಮುದಾಯದ ಪರವಾಗಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುತ್ತಿರುವುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದು ಮಹಿಪಾಲ್ ಸಿಂಗ್ ಹೇಳಿದ್ದಾರೆ.

ಇನ್ನು ಮಹಿಪಾಲ್ ಸಿಂಗ್ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಬಿಡುಗಡೆ ಮಾಡಿರುವ ಉದಯೋನ್ಮುಖ 30 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಕಳೆದ ನವೆಂಬರ್ ಮುಲ್ತಾನ್ ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಪಾಕ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಶಹರ್ಯಾರ್ ಖಾನ್ ಅವರ ಗಮನ ಸೆಳೆಯುವಲ್ಲಿ ಮಹಿಪಾಲ್ ಸಿಂಗ್ ಯಶಸ್ವಿಯಾಗಿದ್ದಾರೆ.

Comments are closed.