ಮುಂಬೈ

ಪುಣೆಯ ಮನೆಯೊಂದರಲ್ಲಿ ಸಿಕ್ಕಿತು ಬರೊಬ್ಬರಿ 70 ವಿಷಕಾರಿ ಹಾವುಗಳು !ಈ ಹಾವುಗಳನ್ನು ದಂಪತಿಗಳು ಸಂಗ್ರಹಿಸಿಟ್ಟಿದ್ದು ಏಕೆ ಗೊತ್ತಾ..?

Pinterest LinkedIn Tumblr

snakes

ಪುಣೆ: ಮಹಾರಾಷ್ಟ್ರದ ಪುಣೆಯ ಮನೆಯೊಂದರಲ್ಲಿ ಬರೊಬ್ಬರಿ 70 ವಿಷಕಾರಿ ಹಾವುಗಳ ಪತ್ತೆಯಾಗಿದ್ದು, ಹಾವುಗಳನ್ನು ಸಂಗ್ರಹಿಸಿ ಅವುಗಳಿಂದ ವಿಷ ತೆಗೆದು ಕಳ್ಳಸಾಗಣೆ ಮಾಡುತ್ತಿದ್ದ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

snakes12

ಮೂಲಗಳ ಪ್ರಕಾರ ಪುಣೆಯ ಚಕನ್ ಪ್ರದೇಶದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ರಂಜಿತ್ ಖರ್ಗೆ ಎಂಬಾತ ಸುಮಾರು 70ಕ್ಕೂ ಹೆಚ್ಚು ವಿಷಕಾರಿ ಹಾವುಗಳನ್ನು ಸಂಗ್ರಹಿಸಿಟ್ಟಿದ್ದನಂತೆ. ಅಘಾತಕಾರಿ ಅಂಶವೆಂದರೆ ಹಾವುಗಳಿದ್ದ ಈ ಮನೆಯಲ್ಲೇ ರಂಜಿತ್ ನ ಪತ್ನಿ ಹಾಗೂ ಮಕ್ಕಳು ವಾಸವಿದ್ದರಂತೆ. ಮನೆಯಲ್ಲಿ ಹಾವುಗಳಿರುವ ವಿಚಾರ ಪತ್ನಿ ಮಕ್ಕಳಿಗೂ ತಿಳಿದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯಲ್ಲಿ ಅಕ್ರಮವಾಗಿ ಹಾವುಗಳನ್ನು ಸಂಗ್ರಹಿಸಿಟ್ಟಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಮನೆ ಮೇಲೆ ದಾಳಿ ಮಾಡಿದಾಗ ನಿಜಕ್ಕೂ ಅವರಿಗೆ ಅಚ್ಚರಿ ಕಾದಿತ್ತು. ಪತ್ನಿ ಮತ್ತು ಮಕ್ಕಳು ಆಡುವ ಮನೆಯಲ್ಲೇ ರಂಜಿತ್ ಹಾವುಗಳನ್ನು ಶೇಖರಿಸಿ ಇಟ್ಟಿದ್ದ. ಹಾವಿನ ವಿಷಕ್ಕೆ ಅಪಾರ ಪ್ರಮಾಣ ಬೆಲೆ ಇದ್ದು, ಈ ವಿಚಾರ ತಿಳಿದಿದ್ದ ರಂಜಿತ್ ತನ್ನ ಸ್ನೇಹಿತರು ಮತ್ತು ಕೆಲ ಹಾವಾಡಿಗರೊಂದಿಗೆ ಸೇರಿ ಹಾವುಗಳನ್ನು ಸಂಗ್ರಹಿಸಿದ್ದನಂತೆ. ಅಲ್ಲದೆ ಅವುಗಳಿಂದ ಅಕ್ರಮವಾಗಿ ವಿಷ ತೆಗೆದು ಅವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಹಾವಿನ ವಿಷದ ಕಳ್ಳಸಾಗಣೆದಾರ ರಂಜಿತ್ ನನ್ನು ಮತ್ತು ಹಾವು ಹಿಡಿಯಲು ನೆರವಾಗುತ್ತಿದ್ದ ಆತನ ಸ್ನೇಹಿತ ಧನಂಜಯ್ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Comments are closed.