ಕರಾವಳಿ

ಕಾಲೇಜಿಗೆ ತೆರಳಿದ ಉಡುಪಿಯ 16 ವರ್ಷದ ಬಾಲೆ ನಾಪತ್ತೆ

Pinterest LinkedIn Tumblr

ಉಡುಪಿ: ಕಾಲೇಜಿಗೆಂದು ತೆರಳಿದ 16 ವರ್ಷ ಪ್ರಾಯದ ಯುವತಿ ಕಾಣೆಯಾದ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಬಡಗುಬೆಟ್ಟು ಶಾಂತಿನಗರ ನಿವಾಸಿ ಅರಫ್ (16) ಕಾಣೆಯಾದವಳು.

udupi_lady_missing

ಮಂಗಳವಾರ ಬೆಳ್ಳಿಗ್ಗೆ ಉಡುಪಿ ಶಾಂತಿ ನಗರದ ಸಿ.ಟಿ ಗೇಟ್ ಬಿಲ್ಡಿಂಗ್ ನ ಮನೆ ನಂಬ್ರ 101 ರ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೋದ ಅರಫ್ ಕಾಲೇಜಿಗೆ ಹೋಗಿರಲಿಲ್ಲ ಅಲ್ಲದೇ ಮನೆಗೂ ಬಾರದೇ ಕಾಣೆಯಾಗಿದ್ದು ಬೆದರಿದ ಮನೆಯವರು ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Comments are closed.