ಕ್ರೀಡೆ

ಸೆಹ್ವಾಗ್ ಒಮ್ಮೆ ಟೆಸ್ಟ್ ಪಂದ್ಯವನ್ನು ನಿಲ್ಲಿಸಿದ್ದರಂತೆ ! ಈ ಕುತೂಹಲಕಾರಿ ವಿಷಯವನ್ನು ಅವರೇ ಹೇಳಿದ್ದಾರೆ ನೋಡಿ…

Pinterest LinkedIn Tumblr

India's Virender Sehwag walks off the field after being dismissed by West Indies' Devendra Bishoo during the fifth day of their third and final test cricket match in Mumbai November 26, 2011. REUTERS/Vivek Prakash (INDIA - Tags: SPORT CRICKET)

ಮುಂಬೈ: ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಟೆಸ್ಟ್ ಪಂದ್ಯವನ್ನು ನಿಲ್ಲಿಸಿದ್ದರ ಬಗ್ಗೆ ಇದೀಗ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

2008ರ ಏಪ್ರಿಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಸೆಹ್ವಾಗ್ ತ್ರಿಶತಕ ಸಿಡಿಸಿ ಆರ್ಭಟಿಸಿದ್ದು ಇತಿಹಾಸ. ಈ ವೇಳೆ ಅವರು ತು ಜಾನೆ ನಾ ಹಾಡಿನ ಸಾಹಿತ್ಯ ನೆನಪಾಗದೆ ಬ್ಯಾಟಿಂಗ್ ನಿಲ್ಲಿಸಿದ್ದರಂತೆ.

ಮತ್ತೊಂದು ಸಂಗತಿ ಎಂದರೆ ಆ ಪಂದ್ಯದಲ್ಲಿ 12ನೇ ಆಟಗಾರನಾಗಿದ್ದ ಇಶಾಂತ್ ಶರ್ಮರನ್ನು ಮೈದಾನಕ್ಕೆ ಕರೆಸಿ, ಹಾಡಿನ ಸಾಹಿತ್ಯವನ್ನು ತನ್ನ ಐಪಾಡಿನಿಂದ ತಿಳಿದುಕೊಂಡು ಬರುವಂತೆ ಸೂಚಿಸಿದ್ದರು.

ಸೆಹ್ವಾಗ್ ಡ್ರಿಂಕ್ಸ್ ಗಾಗಿ ಇಶಾಂತ್ ರನ್ನು ಕರೆಸಿಕೊಂಡರು ಎಂದು ಎಲ್ಲರೂ ತಿಳಿದಿದ್ದರಂತೆ. 12ನೇ ಆಟಗಾರರನ್ನು ಕೆಲವೊಮ್ಮೆ ಹೀಗೂ ಬಳಸಿಕೊಳ್ಳಬಹುದು ಎಂದು ಸೆಹ್ವಾಗ್ ಸಮಾರಂಭವೊಂದರಲ್ಲಿ ಹೇಳಿಕೊಂಡಿದ್ದಾರೆ.

Comments are closed.