ಕ್ರೀಡೆ

ಬ್ಯಾಟ್ ಹಿಡಿದು ಕ್ರೀಡಾಲೋಕದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ 5 ವರ್ಷದ ಪುಟ್ಟ ಬಾಲಕನ ವೀಡಿಯೊ ವೈರಲ್

Pinterest LinkedIn Tumblr

https://youtu.be/vL7YmcrdL-0

ನವದೆಹಲಿ: ಪುಟಾಣಿ ಮಕ್ಕಳೊಂದಿಗೆ ಪ್ಲಾಸ್ಟಿಕ್ ಬ್ಯಾಟ್ ಹಿಡಿದು ಆಡುವ ವಯಸ್ಸು ಆಗಿದ್ದರೂ, ಇಲ್ಲೊಬ್ಬ ಪುಟ್ಟ ಬಾಲಕನೊಬ್ಬ ಪ್ಯಾಡ್, ಹೆಲ್ಮೆಟ್ ಧರಿಸಿ ಬ್ಯಾಟ್ ಹಿಡಿದು ಬಂದು ಅನುಭವಿ ಕ್ರಿಕೆಟರ್ ನಂತೆ ಮೈದಾನಕ್ಕಿಳಿದು ಆಟವಾಡುವ ಮೂಲಕ ಕ್ರೀಡಾಲೋಕದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ದೆಹಲಿಯ ಅಂಡರ್-14 ತಂಡದಲ್ಲಿ ಆಟವಾಡುತ್ತಿರುವ ಈ ಪುಟ್ಟ ಬಾಲಕನ ಹೆಸರು ರುದ್ರಪ್ರತಾಪ್ ಸಿಂಗ್, ಐದು ವರ್ಷದ ಈ ಪೋರ ಬ್ಯಾಟ್ ಹಿಡಿದು ತನ್ನ ವಯಸ್ಸಿಗಿಂತಲೂ ದುಪ್ಪಟ್ಟು ವಯಸ್ಸಿರುವ ಕ್ರಿಕೆಟರ್ ಗಳ ಜೊತಗೆ ಆಟವಾಡಿದ್ದಾನೆ. ಬಾಲಕ ಬ್ಯಾಟಿಂಗ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ.

ರುದ್ರಪ್ರತಾಪ್ ಸಿಂಗ್ 5 ವರ್ಷದ ಬಾಲಕನಾಗಿದ್ದು, ಈತನಿಗೆ ಸರಿಹೊಂದುವ ಅಳತೆಯ ಪ್ಯಾಡ್ ಗಳು, ಹೆಲ್ಮೆಟ್ ಗಳು ಲಭ್ಯವಾಗಿಲ್ಲ. ಆದರೂ, ಯಾವುದಕ್ಕೂ ಹಿಂಜರಿಯದೆಯೇ ಕ್ಯಾಪ್ ಧರಿಸಿ ಅದರ ಮೇಲೆ ಹೆಲ್ಮೆಟ್ ಧರಿಸಿ ಆಟವಾಡಿದ್ದಾನೆ. ಕ್ರಿಕೆಟ್ ಟೂರ್ನಿಯಲ್ಲಿ ಕಾಣಿಸಿಕೊಂಡ ಈ 5 ವರ್ಷದ ಬಾಲಕ ಪಿಚ್ ನಲ್ಲಿ ಬಾಲ್ ಎದುರಿಸಿದ ಶೈಲಿ, ವಿಕೆಟ್ ಮುಂದೆ ಬಂದು ಬ್ಯಾಟ್ ಕುಟ್ಟಿತ್ತಿರುವ ಪರಿ ಪಂದ್ಯದ ಕಾಮೆಂಟರಿ ಮಾಡುತ್ತಿದ್ದವರಿಂದ ಹಿಡಿದು ಪಂದ್ಯವನ್ನು ಟಿವಿಯಲ್ಲಿ ನೋಡುತ್ತಿದ್ದವರಿಗೂ ಆಶ್ಚರ್ಯವನ್ನು ಮೂಡಿಸಿದೆ.

ಅಂಡರ್-14 ಕ್ರಿಕೆಟ್ ತಂಡದಲ್ಲಿರುವ ಎಲ್ಲಾ ಮಕ್ಕಳು 14 ವರ್ಷದ ಮೇಲಿನವರೇ ಆಗಿದ್ದು, ರುದ್ರಪ್ರತಾಪ್ ಸಿಂಗ್ ಮಾತ್ರ 5 ವರ್ಷದ ಆಟಗಾರನಾಗಿದ್ದಾನೆ. ಆದರೆ, ವಯಸ್ಸಿನ ಅಳುಕಿಲ್ಲದೆ ಬಾಲಕ ಮೈದಾನದಲ್ಲಿ ಕಾಣಿಸಿಕೊಂಡಿದ್ದು ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

Comments are closed.