ದುಬೈಯ ACME ಬಿಲ್ಡಿಂಗ್ ಮೆಟಿರೀಯಲ್ಸ್ ಪ್ರಾಯೋಜಕತ್ವದಲ್ಲಿ ದುಬೈಯಲ್ಲಿರುವ ಎಲ್ಲಾ ಕನ್ನಡಿಗರಲ್ಲಿ ಸ್ಪೂರ್ತಿ ಮತ್ತು ಸಮೃದ್ಧಿ ತುಂಬುವ ಸಂಕೇತವಾದ ಯುನೈಟೆಡ್ ಕಪ್-2016 ವಾರ್ಷಿಕ ಹಬ್ಬ ಏರ್ಪಡಿಸಲಾಗಿದ್ದು, ವಾಲಿಬಾಲ್ ಸೇರಿದಂತೆ ಹತ್ತು ಹಲವು ಸ್ಪರ್ಧೆಗಳು, ಪ್ರತಿಭಾ ಅನಾವರಣಗಳು ನಡೆಯಲಿವೆ.
ಒಂದು ದಿನ ಪೂರ್ತಿ ನಡೆಯುವ ಈ ಹಬ್ಬ ಡಿಸೆಂಬರ್ 2ರಂದು ಶಾರ್ಜಾದ ಸ್ಕೈಲೈನ್ ವಿಶ್ವವಿದ್ಯಾಲ ಕಾಲೇಜು ಕ್ಯಾಂಪಸ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಅಂದು ವಿವಿಧ ರೀತಿಯ ಪ್ರತಿಭೆಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲಿವೆ.
ಮಿಶ್ರ ಥ್ರೋಬಾಲ್, ಮಹಿಳಾ ಥ್ರೋಬಾಲ್, ಪುರುಷರ ಥ್ರೋಬಾಲ್ ಮತ್ತು ವಾಲಿಬಾಲ್, ವಿವಿಧ ಕೌಶಲ್ಯ ಮತ್ತು ಪ್ರತಿಭೆಗಳ ಜನರು ಒಟ್ಟಾಗಿ ಆಟವಾಡುವ ಮತ್ತು ಒಟ್ಟು ಸೇರುವ ಅವಕಾಶ ಇಲ್ಲಿ ಕಲ್ಪಿಸಲಾಗಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ದುಬೈಯ ACME ಬಿಲ್ಡಿಂಗ್ ಆಂಡ್ ಮೆಟಿರೀಯಲ್ಸ್ ಸಂಸ್ಥೆ ಪ್ರಾಯೋಜಕತ್ವ ನೀಡಿದೆ. ಸತತ ಎರಡನೇ ವರ್ಷ ಈ ಸಂಸ್ಥೆ ಪ್ರಾಯೋಜಕತ್ವ ವಹಿಸುತ್ತಿರುವುದು.
ದುಬೈಯಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಒಟ್ಟು 38 ತಂಡಗಳು ಭಾಗವಹಿಸಲಿವೆ. ಮುಂದಿನ ಪೀಳಿಗೆಯ ಪ್ರತಿಭೆಗಳನ್ನು ಗುರುತಿಸಲು ಇದೊಂದು ಒಳ್ಳೆಯ ಅವಕಾಶ
ಯುನೈಟೆಡ್ ಕಪ್ 2016
ದಿನಾಂಕ; ಡಿಸೆಂಬರ್ 2, 2016
ಸ್ಥಳ; ಸ್ಕೈಲೈನ್ ಯುನಿವರ್ಸಿಟಿ ಕಾಲೇಜು ಕ್ಯಾಂಪಸ್ ಕ್ರೀಡಾಂಗಣ, ಶಾರ್ಜಾ
ಕ್ರೀಡೆಗಳು: ಪುರುಷರ ವಾಲಿಬಾಲ್, ಮಹಿಳೆಯರ/ಪುರುಷರ /ಮಿಶ್ರ ಥ್ರೋಬಾಲ್
ಸಂಪರ್ಕಕ್ಕೆ
ವಿನೋದ್ ಶೆಟ್ಟಿ -971 (0) 561138281
ಜಸೋದ್ ಡಿ ಕುನ್ಹಾ 971(0)557982591