ಕ್ರೀಡೆ

ಧೋನಿಯನ್ನು ಏರ್’ಪೋರ್ಟ್’ವರೆಗೂ ಚೇಸ್ ಮಾಡಿದ ಹುಡುಗಿ

Pinterest LinkedIn Tumblr

carನವದೆಹಲಿ(ನ. 04): ಫ್ಯಾನ್ಸ್ ಹೀಗೂ ಇರ್ತಾರಾ ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ. ಹಮ್ಮರ್ ಕಾರಿನಲ್ಲಿ ಏರ್’ಪೋರ್ಟ್’ಗೆ ಹೊರಟಿದ್ದ ಧೋನಿಯನ್ನು ಹುಡುಗಿಯೊಬ್ಬಳು ಸ್ಕೂಟಿಯಲ್ಲಿ ಚೇಸ್ ಮಾಡಿಕೊಂಡು ಹೋದ ಘಟನೆ ನಡೆದಿದೆ. ಸ್ಕೂಟಿಯಲ್ಲಿದ್ದ ಆ ಹುಡುಗಿ ಹೆಸರು ಆರಾಧ್ಯ. ಆಕೆ ಧೋನಿಯ ದೊಡ್ಡ ಫ್ಯಾನ್. ನೆಚ್ಚಿನ ಕ್ರಿಕೆಟಿಗನ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕೆಂಬ ಒಂದೇ ಕಾರಣಕ್ಕೆ ಏರ್’ಪೋರ್ಟ್’ವರೆಗೂ ಧೋನಿಯನ್ನು ತನ್ನ ಸ್ಕೂಟರ್’ನಲ್ಲಿ ಹಿಂಬಾಲಿಸಿದ್ದಳು ಆರಾಧ್ಯ.
ಮುಂಬೈಗೆ ತೆರಳುವ ಫ್ಲೈಟ್ ಹಿಡಿಯುವ ತರಾತುರಿಯಲ್ಲಿದ್ದ ಧೋನಿಗೆ ಈ ಹುಡುಗಿಯ ವರ್ತನೆ ಕಂಡು ಅಚ್ಚರಿಯಾಯಿತು. ಆದರೆ, ಅಭಿಮಾನಿಗಳನ್ನು ಎಂದಿಗೂ ನಿರಾಸೆಗೊಳಿಸದ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ ಕ್ಯಾಪ್ಟನ್ ಎಂಎಸ್ ಧೋನಿ ತನ್ನ ಕಾರು ನಿಲ್ಲಿಸಿ ಹುಡುಗಿಯೊಂದಿಗೆ ಸೆಲ್ಫಿ ತೆಗೆದುಕೊಂಡರು.

Comments are closed.