ಮೈಸೂರು(ನ.04): ಮೈಸೂರು ಡಿಸಿ ಶಿಖಾಗೆ ಧಮ್ಕಿ ಹಾಕಿದ್ದ ಸಿಎಂ ಸಿದ್ದರಾಮಯ್ಯ ಆಪ್ತ ಮರಿಗೌಡ ಅಮಾನತು ಆದೇಶವನ್ನ ವಾಪಸ್ ಪಡೆಯಲಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಬೋಸರಾಜು ಅವರು, ಮರಿಗೌಡ ಅಮಾನತು ಆದೇಶವನ್ನ ಹಿಂಪಡೆದಿದ್ಧಾರೆ.
ಡಿಸಿ ಶಿಖಾಗೆ ಧಮ್ಕಿ ಹಾಕಿದ್ದ ಪ್ರಕರಣದಲ್ಲಿ ಮರಿಗೌಡ ಬಂಧನಕ್ಕೊಳಗಾಗಿದ್ದರು. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟಾದ ಹಿನ್ನೆಲೆಯಲ್ಲಿ ಮರಿಗೌಡರ ಕೆಪಿಸಿಸಿ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು.