ಮುಂಬೈ: ಅಭಿಮಾನಿಗಳು ನಿತ್ಯದ ಬದುಕಿನಲ್ಲಿ ಜನ ಸಾಮಾನ್ಯರೊಂದಿಗೆ ಪ್ರೀತಿಯಿಂದ ವರ್ತಿಸಬೇಕು ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.
28 ವರ್ಷದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಅಭಿಮಾನಿಯೊಬ್ಬರು ‘ನಿಮ್ಮ ಅಭಿಮಾನಿಗಳಿಗೆ ಏನಾದರೂ ಹೇಳ ಬಯಸುತ್ತೀರಾ?’ ಎಂದು ಕೇಳಿದ ಪ್ರಶ್ನೆಗೆ, ‘ಅಭಿಮಾನಿಗಳು ದ್ವೇಷ ಹಬ್ಬಿಸುವ ಬದಲು ಪ್ರೀತಿಯನ್ನು ಹಂಚಿಕೊಳ್ಳಬೇಕು ಎಂದು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಅನುಷ್ಕಾ ಶರ್ಮಾ, ರಣಬೀರ್ ಕಪೂರ್, ಐಶ್ವರ್ಯಾ ರೈ ಅಭಿನಯದ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರ ಅಕ್ಟೋಬರ್ 28 ರಂದು ಬಿಡುಗಡೆಯಾಗಿದ್ದು, ಇದುವರೆಗೂ ₹100 ಕೋಟಿಗೂ ಹೆಚ್ಚು ಸಂಪಾದಿಸಿದೆ.
‘ಏ ದಿಲ್ ಹೈ ಮುಷ್ಕಿಲ್’ ಚಿತ್ರವನ್ನು ವೀಕ್ಷಿಸಿದ ಅಭಿಮಾನಗಳಿಗೆ ಅನುಷ್ಕಾ ಶರ್ಮಾ ಧನ್ಯವಾದ ತಿಳಿಸಿದ್ದರು.
Comments are closed.