ಕ್ರೀಡೆ

ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 7500 ರನ್‌ ಗಳಿಸಿದ ಕೊಹ್ಲಿ

Pinterest LinkedIn Tumblr

kohiliffffರಾಂಚಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ ಮಾಡಿದ್ದಾರೆ.

ಭಾರತ– ನ್ಯೂಜಿಲೆಂಡ್‌ ನಡುವಿನ 4ನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 45 ರನ್‌ ಗಳಿಸುವ ಮೂಲಕ ಅಂತರ ರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 7500 ರನ್‌ ಕಲೆಹಾಕಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿರ್ಯಸ್‌ 174 ಇನ್ನಿಂಗ್ಸ್‌ನಲ್ಲಿ 7500 ರನ್‌ ಗಳಿಸಿದ್ದರು. ಆದರೆ ವಿರಾಟ್‌ ಕೊಹ್ಲಿ 167 ಇನ್ನಿಂಗ್ಸ್‌ಗಳಲ್ಲಿ 7500 ರನ್‌ ಗಳಿಸಿದ್ದು, ಎಬಿ ಡಿವಿಲಿರ್ಯಸ್‌ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

Comments are closed.