ಕ್ರೀಡೆ

ಸದ್ಯದ ಪರಿಸ್ಥಿತಿಯಲ್ಲಿ ಬೇರೆ ದೇಶಗಳ ತಂಡಗಳನ್ನು ಪಾಕ್ ಗೆ ಆಹ್ವಾನಿಸುವುದು ಬೇಡ: ಶೊಯೇಬ್ ಅಖ್ತರ್

Pinterest LinkedIn Tumblr

Shoaib-Akhtarಕರಾಚಿ: ಸದ್ಯದ ಪರಿಸ್ಥಿತಿಯಲ್ಲಿ ಬೇರೆ ದೇಶಗಳ ತಂಡಗಳನ್ನು ಪಾಕಿಸ್ತಾನಕ್ಕೆ ಆಹ್ವಾನಿಸುವುದು ಬೇಡ ಎಂದು ಮಾಜಿ ಕ್ರಿಕೆಟಿಗ ಶೊಯೇಬ್ ಅಖ್ತರ್ ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಕ್ವೆಟ್ಟಾದಲ್ಲಿ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ಉಗ್ರರ ದಾಳಿ ನಡೆದಿತ್ತು, ಈ ದಾಳಿಯಲ್ಲಿ 62 ಪೊಲೀಸರು, ಇಬ್ಬರು ಯೋಧರು ಹತ್ಯೆಯಾಗಿದ್ದು, 170 ಮಂದಿ ಗಾಯಗೊಂಡಿದ್ದರು. ಈ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅಖ್ತರ್, ಸದ್ಯ ದೇಶದಲ್ಲಿ ಭದ್ರತಾ ಸ್ಥಿತಿ ಉತ್ತಮವಾಗಿಲ್ಲ ಎಂದು ಹೇಳಿದ್ದಾರೆ.

ಜಿಯೊ ಸುದ್ದಿವಾಹಿನಿಯಲ್ಲಿ ಮಾತನಾಡಿದ ಅಖ್ತರ್, ಇಲ್ಲಿನ ವಾತಾವರಣ ಸಹಜ ಸ್ಥಿತಿಗೆ ಮರಳುವವರೆಗೆ ಕಾಯಿರಿ. ಸುರಕ್ಷಿತ ವಾತಾವರಣ ಇಲ್ಲದೇ ಇರುವಾಗ ವಿದೇಶಿ ರಾಷ್ಟ್ರಗಳನ್ನು ಪಾಕಿಸ್ತಾನಕ್ಕೆ ಆಮಂತ್ರಿಸಿ ಅಪಾಯಕ್ಕೀಡಾಗುವುದು ಬೇಡ. ಅಂತರರಾಷ್ಟ್ರೀಯ ಕ್ರಿಕೆಟ್ ಪಾಕಿಸ್ತಾನಕ್ಕೆ ಮರಳಿ ಬರಲಿದೆ. ಆದರೆ ಒಂದಷ್ಟು ಕಾಲಾವಕಾಶ ಬೇಕು ಎಂದಿದ್ದಾರೆ.

Comments are closed.