ಕ್ರೀಡೆ

150 ಸ್ಟಂಪಿಂಗ್ ದಾಖಲೆ ನಿರ್ಮಿಸಿದ ಏಕೈಕ ಕ್ರಿಕೆಟಿಗ ಧೋನಿ

Pinterest LinkedIn Tumblr

dhoniಮೊಹಾಲಿ: ಮೊಹಾಲಿಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 150 ಸ್ಟಂಪಿಂಗ್ ಮಾಡಿದ ಏಕೈಕ ವಿಕೆಟ್ ಕೀಪರ್ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

35 ವರ್ಷ ವಯಸ್ಸಿನ ಮಹೇಂದ್ರ ಸಿಂಗ್ ಧೋನಿ ಅಮಿತ್ ಮಿಶ್ರಾ ಬೌಲಿಂಗ್‌ನಲ್ಲಿ ರಾಸ್ ಟೇಲರ್‌ರನ್ನು ಸ್ಟಂಪ್ ಮಾಡುವ ಮೂಲಕ 150ನೇ ಸ್ಟಂಪಿಂಗ್ ಮಾಡಿದ್ದಾರೆ.

ಪಂದ್ಯದ 31ನೇ ಓವರ್‌ನಲ್ಲಿ ಮಿಶ್ರಾ ಬೌಲಿಂಗ್‌ನಲ್ಲಿಯೇ ಲೂಕೆ ರೊಂಚಿಯವರನ್ನು ಸ್ಟಂಪ್ ಮಾಡಿದ ಧೋನಿ 151ನೇ ಸ್ಟಂಪಿಂಗ್ ಮೈಲುಗಲ್ಲು ದಾಖಲಿಸಿದ್ದಾರೆ.

ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಕುಮಾರ್ ಸಂಗಕ್ಕಾರಾ 139 ಸ್ಟಂಪಿಂಗ್ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಲಂಕಾ ಆಟಗಾರ ರೋಮೇಶ್ ಕುಲವಿತರಣಾ 101 ಸ್ಟಂಪಿಂಗ್ ದಾಖಲೆ ಹೊಂದಿದ್ದು ಮೂರನೇ ಸ್ಥಾನ ಪಡೆದಿದ್ದಾರೆ.

ಪಾಕಿಸ್ತಾನದ ಮೊಯಿನ್ ಖಾನ್ 93 ಮತ್ತು ಆಸ್ಟ್ರೇಲಿಯಾದ ಕ್ರಿಕೆಟಿಗ ಆಡಮ್ ಗಿಲ್‌ಕ್ರಿಸ್ಟ್ 92 ಸ್ಟಂಪಿಂಗ್ ಮಾಡಿದ ದಾಖಲೆ ಹೊಂದಿದ್ದಾರೆ.

Comments are closed.