ಕ್ರೀಡೆ

ಬೌದ್ಧರ – ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ ಫುಟ್​ಬಾಲ್ ತಾರೆ ರೊನಾಲ್ಡೋ

Pinterest LinkedIn Tumblr

ronaldo

ನವದೆಹಲಿ: ರಿಯಲ್ ಮ್ಯಾಡ್ರಿಡ್ ಕ್ಲಬ್ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಈಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರೊನಾಲ್ಡೋ ಬುದ್ಧನ ವಿಗ್ರಹವಿರುವ ಕಟ್ಟೆಯ ಮೇಲೆ ಶೂ ಧರಿಸಿದ ಕಾಲನ್ನು ಇರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವ ಮೂಲಕ ಬೌದ್ಧರ ಮತ್ತು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರೊನಾಲ್ಡೋ ನಾನು ನಿಮ್ಮ ದೊಡ್ಡ ಅಭಿಮಾನಿ. ಆದರೆ ನೀವು ಮೊದಲು ಬುದ್ಧನಿಗೆ ಗೌರವ ಕೊಡುವುದನ್ನು ಕಲಿಯಬೇಕು. ನೀವು ಯಾವುದೇ ಧರ್ಮ ಪಾಲನೆ ಮಾಡಿ. ಆದರೆ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರಬೇಡಿ ಎಂದು ರೊನಾಲ್ಡೋ ಅಭಿಮಾನಿಯೊಬ್ಬರು ಫೋಟೋಗೆ ಕಾಮೆಂಟ್ ಹಾಕಿದ್ದಾರೆ.

ನೀವು ಹೇಗೆ ಇಂತಹ ತಪ್ಪು ಮಾಡಿದಿರಿ. ಈ ಮೂಲಕ ನಿಮ್ಮ ದೊಡ್ಡ ಅಭಿಮಾನಿಯನ್ನು ನೀವು ಕಳೆದುಕೊಂಡಿದ್ದೀರಿ ಎಂದು ಮತ್ತೊಬ್ಬ ಅಭಿಮಾನಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಇದರ ಜತೆಯಲ್ಲೇ ಇನ್ಸ್ಟಾಗ್ರಾಮ್ಲ್ಲಿ ಸಾವಿರಾರು ಜನರು ರೊನಾಲ್ಡೋ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ರೊನಾಲ್ಡೋ ತಮ್ಮ ಖಾತೆಯಿಂದ ಇನ್ನೂ ಫೋಟೋ ಡಿಲೀಟ್ ಮಾಡಿಲ್ಲ ಮತ್ತು ಕ್ಷಮಾಪಣೆಯನ್ನೂ ಸಹ ಕೇಳಿಲ್ಲ.

Comments are closed.