ಕ್ರೀಡೆ

ವಿರಾಟ್ ಕೊಹ್ಲಿ ಜೀವನಚಿತ್ರ ಪುಸ್ತಕ ಅನಾವರಣ

Pinterest LinkedIn Tumblr

viratkohliನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಜೀವನ ಚಿತ್ರಣದ ಪುಸ್ತಕ ಹಲವು ಕ್ರಿಕೆಟ್ ತಾರೆಯರ ಸಮ್ಮುಖದಲ್ಲಿ ಅನಾವರಣಗೊಂಡಿದೆ.
“ಡ್ರಿವನ್:ವಿರಾಟ್ ಕೊಹ್ಲಿ ಸ್ಟೋರಿ’ ಎಂಬ ಪುಸ್ತಕವನ್ನಿ ಹಿರಿಯ ಪತ್ರಕರ್ತ ವಿಜಯ್ ಲೋಕಪಲ್ಲಿ ಬರೆದಿದ್ದು ಮಂಗಳವಾರ ಅನಾವರಣಗೊಂಡಿದೆ.
ಈ ಸಂದರ್ಭದಲ್ಲಿ ಕೊಹ್ಲಿ, ಅವರ ತರಬೇತುದಾರ ರಾಜ್ ಕುಮಾರ್ ಶರ್ಮ, ವೀರೇಂದ್ರ ಸೆಹ್ವಾಗ್, ಕಪಿಲ್ ದೇವ್, ಅನಿಲ್ ಕುಂಬ್ಳೆ, ರವಿ ಶಾಸ್ತ್ರಿ, ಆಶಿಶ್ ನೆಹ್ರಾ, ಅಜಯ್ ಜಡೇಜಾ, ಕಾರ್ತಿಕ್ ಮುರಳಿ, ಹರಿ ಗಿದ್ವಾನಿ ಮತ್ತು ಅಂಜುಮ್ ಚೋಪ್ರಾ ಕೂಡ ಭಾಗವಹಿಸಿದ್ದಾರೆ.
ಬಿಡುಗಡೆಯ ಸಮಯದಲ್ಲಿ ಮಾತನಾಡಿದ ಕೊಹ್ಲಿ “ವಿಜಯ್ ಸರ್ ನನ್ನ ಬಗ್ಗೆ ಪುಸ್ತಕ ಬರೆದಿರುವುದಕ್ಕೆ ನಾನು ವಿನೀತನಾಗಿದ್ದೇನೆ. ನನ್ನ ಕುಟುಂಬ, ಗೆಳೆಯರು, ತಂಡದ ಸದಸ್ಯರು, ಸಲಹೆಗಾರರು ಇನ್ನಿತರ ಎಲ್ಲರಿಗು ನಾನು ಕೃತಾರ್ಥನಾಗಿದ್ದೇನೆ. ಈ ಪುಸ್ತಕ ನನ್ನ ಬಗ್ಗೆ ಎಷ್ಟಿದೆಯೋ ಅವರ ಬಗ್ಗೆಯೂ ಅಷ್ಟೇ ಇದೆ” ಎಂದಿದ್ದಾರೆ.

Comments are closed.