ಕ್ರೀಡೆ

ಅಗ್ರಸ್ಥಾನದಲ್ಲಿಯೇ ಮುಂದುವರಿದ ಸಾನಿಯಾ

Pinterest LinkedIn Tumblr

saniyaನವದೆಹಲಿ: ವಿಶ್ವ ಟೆನಿಸ್ ಶ್ರೇಯಾಂಕದ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ, ಸತತ 80 ವಾರಗಳವರೆಗೆ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸಾನಿಯಾ, ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

ಸಾನಿಯಾ ಮಿರ್ಜಾ ತಮ್ಮ ಜತೆಗಾರ್ತಿ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಚಾರ್ಲ್‌ಸ್ಟೋನ್‌ನಲ್ಲಿ ನಡೆದ ವೋಲ್ವೋ ಕಾರ್ ಓಪನ್ ಪಂದ್ಯಾವಳಿಯಲ್ಲಿ ಜಯಗಳಿಸಿದ ನಂತರ ವಿಶ್ವ ಮಹಿಳಾ ಡಬಲ್ಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಏಕೈಕ ಭಾರತೀಯ ಮಹಿಳಾ ಕ್ರೀಡಾಪಟು ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

ಒಂದು ವೇಳೆ, ನಾನು ಗೆಲ್ಲಲೇಬೇಕು ಎನ್ನುವ ಛಲದೊಂದಿಗೆ ಕಠಿಣ ಪರಿಶ್ರಮ ತೋರಿದಲ್ಲಿ ಯಾವುದು ಅಸಾಧ್ಯವಲ್ಲ ಎಂದು ಸಾನಿಯಾ ಮಿರ್ಜಾ ಕಿವಿಮಾತು ಹೇಳಿದ್ದಾರೆ.

ಹೈದ್ರಾಬಾದ್ ಮೂಲದ ಸಾನಿಯಾ ಮಿರ್ಜಾಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.

Comments are closed.