ರಾಷ್ಟ್ರೀಯ

ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ

Pinterest LinkedIn Tumblr

delhi-rapeಚಂಡೀಗಡ್: 35 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ. ಮಹಿಳೆಯ ಸಂಬಂಧಿಕರೇ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹರಿಯಾಣಾದ ಮೇವತ್ ಜಿಲ್ಲೆಯಲ್ಲಿ ಮಹಿಳೆಯ ಮಾವನ ಸಂಬಂಧಿಕನಾದ ಮುಖ್ಯ ಆರೋಪಿ, ತವರಿಗೆ ಹೋಗಿದ್ದ ಮಹಿಳೆಯನ್ನು ಕಾರಿನಲ್ಲಿ ಕರೆದುಕೊಂಡು ಬರಲು ತೆರಳಿದ್ದ ಎನ್ನಲಾಗಿದೆ.

ಮಹಿಳೆಯನ್ನು ಮಾವನ ಮನೆಗೆ ಕರೆದುಕೊಂಡು ಬರುವುದರ ಬದಲಿಗೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಹಿಳೆಯ ಮೇಲೆ ಮುಖ್ಯ ಆರೋಪಿ ಮತ್ತು ಇತರ ನಾಲ್ವರು ಆರೋಪಿಗಳು ಗ್ಯಾಂಗ್‌ರೇಪ್ ಎಸಗಿದ್ದಾರೆ. ಗ್ಯಾಂಗ್‌ರೇಪ್ ಎಸಗಿದ ನಂತರ ಆಕೆಯನ್ನು ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.

ಆರೋಪಿಗಳ ವಿರುದ್ಧ ಗ್ಯಾಂಗ್‌ರೇಪ್ ಮತ್ತು ಹತ್ಯಾ ಪ್ರಕರಣ ದಾಖಲಿಸಲಾಗಿದೆ ಎಂದು ಮೇವತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಸಿಂಗ್ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಬಿಯರ್ ಬಾಟಲಿಗಳು ಮತ್ತು ಮಹಿಳೆಯ ಒಡೆದ ಬಳೆಗಳು ದೊರೆತಿವೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

Comments are closed.