ಕ್ರೀಡೆ

ಪಾಕಿಸ್ತಾನದ ಕ್ರಿಕೆಟಿಗರಾದ ಆಫ್ರಿದಿ -ಮಿಯಾಂದಾದ್ ಮಧ್ಯೆ ವಾಕ್ಸಮರ !

Pinterest LinkedIn Tumblr

miandad-afridi

ಲಾಹೋರ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಹಾಗೂ ಹಾಲಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಪರಸ್ಪರ ವಾಕ್ಸಮರದ ಮೂಲಕ ಸುದ್ದಿಯಾಗಿದ್ದಾರೆ.

ಟಿವಿ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಮಿಯಾಂದಾದ್ ಆಫ್ರಿದಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ಕೋಚ್ 59 ವರ್ಷದ ಮಿಯಾಂದಾದ್ ಆಫ್ರಿದಿ ಹಲವು ಬಾರಿ ದೇಶಕ್ಕೆ ಮೋಸ ಮಾಡುತ್ತಿರುವಾಗ ಅವರನ್ನು ಹಿಡಿದಿದ್ದೇನೆ. ಅವರು ಹಲವು ಪಂದ್ಯಗಳನ್ನು ಕೈಚೆಲ್ಲಿದ್ದಾರೆ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಶಾಹಿದ್ ಅಫ್ರಿದಿ ಸುಳ್ಳು ಆರೋಪಿ ಮಾಡಿರುವ ಮಿಯಾಂದಾದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಮಿಯಾಂದಾದ್ ಗೆ ಯಾವಾಗಲೂ ಹಣವೇ ಮುಖ್ಯ. ಅವರಂಥ ದಿಗ್ಗಜ ಕ್ರಿಕೆಟಿಗರು ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.

Comments are closed.