ಕ್ರೀಡೆ

ಉಡುಗೊರೆಯಾಗಿ ಬಂದಿದ್ದ ಬಿಎಂ ಡಬ್ಲ್ಯೂ ಕಾರನ್ನು ದೀಪಾ ಕರ್ಮಾಕರ್ ಹಿಂದಿರುಗಿಸಲು ನಿರ್ಧರಿಸಿದ್ದು ಏಕೆ ಗೊತ್ತಾ..? ಇಲ್ಲಿದೆ ಕಾರಣ

Pinterest LinkedIn Tumblr

dipa

ನವದೆಹಲಿ: ರಿಯೋ ಒಲಂಪಿಕ್ಸ್ ನಲ್ಲಿ ಜಿಮ್ನಾಸ್ಟ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಕ್ಕೆ ತಮಗೆ ಉಡುಗೊರೆಯಾಗಿ ಬಂದಿದ್ದ ಬಿಎಂ ಡಬ್ಲ್ಯೂ ಕಾರನ್ನು ದೀಪಾ ಕರ್ಮಾಕರ್ ಹಿಂದಿರುಗಿಸಲು ನಿರ್ಧರಿಸಿದ್ದಾರೆ.

ಅಗರ್ತಲಾದಂತ ಚಿಕ್ಕ ನಗರದಲ್ಲಿ ಇಷ್ಟು ದೊಡ್ಡ ಐಷಾರಾಮಿ ಕಾರನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲ, ಇಲ್ಲಿನ ರಸ್ತೆಗಳು ತುಂಬಾ ಚಿಕ್ಕದಾದುವು. ತಮ್ಮ ಕುಟುಂಬಕ್ಕೆ ಇಷ್ಟು ದೊಡ್ಡ ಕಾರನ್ನು ನಿರ್ವಹಿಸುವ ಶಕ್ತಿಯಿಲ್ಲ. ಹೀಗಾಗಿ ಕಾರನ್ನು ಅದರ ನಿಜವಾದ ಮಾಲೀಕರಾದ ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಚಾಮುಂಡೇಶ್ವರ್ ನಾಥ್ ಅವರಿಗೆ ಹಿಂದಿರುಗಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ದೀಪಾ ಕರ್ಮಾಕರ್ ಅವರ ತರಬೇತುದಾರ ಬಿಶೇಶ್ವರ್ ನಂದಿ, ಇದು ದೀಪಾ ಅವರ ನಿರ್ಧಾರವಲ್ಲ, ಅಗರ್ತಲಾ ದಲ್ಲಿ BMW ಕಾರಿನ ಸರ್ವೀಸ್ ಸೆಂಟರ್ ಇಲ್ಲ ಜೊತೆಗೆ ಇಲ್ಲಿನ ರಸ್ತೆಗಳು ಸರಿಯಿಲ್ಲ ಎಂಬ ಕಾರಣಕ್ಕೆ ದೀಪಾ ಅವರ ಕುಂಟುಂಬ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

Comments are closed.