ಮನೋರಂಜನೆ

ಬಿಗ್‍ಬಾಸ್ ಕನ್ನಡ ಸೀಸನ್ 8ರ ಫಿನಾಲೆಯ ಸ್ಟೇಜ್ ಹತ್ತುವ ನಿರೀಕ್ಷೆಯಲ್ಲಿದ್ದ ದಿವ್ಯಾ ಉರುಡುಗ ಔಟ್

Pinterest LinkedIn Tumblr

ಬಿಗ್‍ಬಾಸ್ ಕನ್ನಡ ಸೀಸನ್ 8ರ ಫಿನಾಲೆಯ ಸ್ಟೇಜ್ ಹತ್ತುವ ನಿರೀಕ್ಷೆಯಲ್ಲಿದ್ದ ದಿವ್ಯಾ ಉರುಡುಗ ಔಟ್ ಆಗಿದ್ದಾರೆ.

ಬಿಗ್‍ಬಾಸ್ ಶೋನ ಫಿನಾಲೆಗೆ ಮಂಜು ಹಾಗು ಅರವಿಂದ್ ಆಯ್ಕೆಯಾಗಿದ್ದಾರೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಯಾರು ವಿಜೇತರು ಎಂಬುದು ಗೊತ್ತಾಗಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ 8 ಟ್ರೋಫಿ ಯಾರ ಪಾಲಾಗಲಿದೆ ಎಂಬ ಕುತೂಹಲವಿತ್ತು. ಅಂತೆಯೇ ಕೆಪಿ ಅರವಿಂದ್, ಮಂಜು ಪಾವಗಡ, ದಿವ್ಯಾ ಉರುಡುಗ ಟಾಪ್ 3 ಸ್ಥಾನದಲ್ಲಿದ್ದರು. ಈ ಮೂವರಲ್ಲಿ ಒಬ್ಬರು ಎಲಿಮಿನೇಟ್ ಆಗಿ ಹೊರಬಂದರೆ, ಇನ್ನುಳಿದ ಇಬ್ಬರನ್ನು ಸ್ವತಃ ಸುದೀಪ್ ಅವರೇ ಬಿಗ್ ಬಾಸ್ ಮನೆಯಿಂದ ವೇದಿಕೆಗೆ ಕರೆ ತರುತ್ತಾರೆ. ಅಂತೆಯೇ ದಿವ್ಯಾ ಉರುಡುಗ ಔಟ್ ಆಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ನಟಿ ದಿವ್ಯಾ ಉರುಡುಗ ಅವರು ಭಾಗವಹಿಸಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ದಿವ್ಯಾ ರನ್ನರ್ ಅಪ್ ಆಗಿರೋದು ಅನೇಕರಿಗೆ ಆಶ್ಚರ್ಯ ಮೂಡಿಸಿದೆ. ವೈಷ್ಣವಿ ಬದಲು ದಿವ್ಯಾ ಹೊರಗಡೆ ಹೋಗುತ್ತಾರೆ ಎಂದು ಮಂಜು ಪಾವಗಡ ಕೂಡ ಅಂದುಕೊಂಡಿದ್ದರಂತೆ.

ಅನಾರೋಗ್ಯದ ಕಾರಣಕ್ಕೆ ದೊಡ್ಮನೆಯಿಂದ ದಿವ್ಯಾ ಉರುಡುಗ ಹೊರಗಡೆ ಬಂದಿದ್ದರು, ಆಮೇಲೆ ಬಿಗ್ ಬಾಸ್ ಸೆಕೆಂಡ್ ಇನಿಂಗ್ಸ್ ಶುರುವಾದಾಗ ಅವರು ಮತ್ತೆ ಬಿಗ್ ಬಾಸ್ ಮನೆ ಸೇರಿಕೊಂಡಿದ್ದರು. ಟಾಸ್ಕ್ ವೇಳೆಯೂ ದಿವ್ಯಾ ಉರುಡುಗ ಗಾಯ ಮಾಡಿಕೊಂಡು ಕೆಲ ಟಾಸ್ಕ್ ಮಾಡಲೇ ಇಲ್ಲ. ಈಗ ಅದೇ ಅವರಿಗೆ ಉಪಯುಕ್ತವಾಗಿದೆ ಎಂದು ಕೂಡ ಪ್ರಶಾಂತ್ ಸಂಬರಗಿ ಹೇಳಿದ್ದರು. ಏನೇ ಇರಲಿ, ದಿವ್ಯಾ ಉರುಡುಗ ಆಡಿದಷ್ಟು ಟಾಸ್ಕ್‌ಗಳನ್ನು ಚೆನ್ನಾಗಿ ಆಡಿದ್ದರು.

Comments are closed.