ಮನೋರಂಜನೆ

ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಟ್ವಿಸ್ಟ್; ನಟಿ ಶುಭಾ ಪೂಂಜಾ ಔಟ್: ಕಾರಣವೇನು ಗೊತ್ತಾ…?

Pinterest LinkedIn Tumblr

ಬಿಗ್ ಬಾಸ್ ಕನ್ನಡ ಸೀಸನ್ 8 ಗ್ರ್ಯಾಂಡ್ ಫಿನಾಲೆ ಆಗಸ್ಟ್ 8ರಂದು ನಡೆಯಲಿದೆ. ಐವರು ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗೆ ತಲುಪಲಿದ್ದಾರೆ. ಫಿನಾಲೆ ಬರುವ ಮುನ್ನ ಮೂವರು ಸ್ಪರ್ಧಿಗಳು ಎಲಿಮಿನೇಟ್ ಆಗಬೇಕು. ಹೀಗಾಗಿ ಶನಿವಾರವೇ ಎಲಿಮಿನೇಶನ್ ನಡೆದಿದೆ. ನಟಿ ಶುಭಾ ಪೂಂಜ ಫಿನಾಲೆಗೆ ಇನ್ನು ಒಂದು ವಾರ ಇದೆ ಎನ್ನುವಾಗ ದೊಡ್ಮನೆಯಿಂದ ಹೊರಬಂದಿದ್ದಾರೆ.

ಟ್ವಿಸ್ಟ್ ನೀಡುವ ಸಲುವಾಗಿ ಶನಿವಾರವೇ ಎಲಿಮಿನೇಶನ್ ನಡೆದಿದೆ. ಇನ್ನು ಮುಂದಿನ ವಾರದ ಮಧ್ಯದಲ್ಲಿ ಕೂಡ ಎಲಿಮನೇಶನ್‌ ನಡೆಯಲಿದೆ. ಟ್ರೋಫಿ ಗೆಲ್ಲಲು ಇನ್ನು ಒಂದು ವಾರ ಇದೆ ಎನ್ನುವಾಗ ಮನೆಯಿಂದ ಹೊರಗಡೆ ಹೋಗಬೇಕು ಎಂದರೆ ಬೇಸರ ಆಗುವುದು ಎಂದು ಸ್ಪರ್ಧಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಶುಭಾ ಪೂಂಜಾ ಔಟ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದರು. ಶುಭಾ ಪೂಂಜಾ ಮನೆಯಿಂದ ಹೊರಗಡೆ ಹೋಗುತ್ತಿರುವುದನ್ನು ಕಂಡು ಮಂಜು ಪಾವಗಡ, ದಿವ್ಯಾ ಉರುಡುಗ ಕಣ್ಣೀರು ಹಾಕಿದ್ದಾರೆ.

ಆಟದ ವಿಚಾರಕ್ಕೆ ಬಂದರೆ ಶುಭಾ ಪೂಂಜಾ ಇತರ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದಾಗ ವೀಕ್ ಇದ್ದರು. ಮನರಂಜನೆ ವಿಚಾರದಲ್ಲಿ ಶುಭಾ ಪೂಂಜಾ ತರಲೆ, ಕೀಟಲೆ ಮಾಡುತ್ತ, ಮುದ್ದುಮುದ್ದಾಗಿ ಮಾತನಾಡುತ್ತಿದ್ದರು. ಇದು ಕೆಲವರಿಗೆ ಕ್ಯೂಟ್ ಅನಿಸಿದರೆ, ಕೆಲವರಿಗೆ ಕಿರಿಕಿರಿಯೂ ಆಗಿತ್ತು.

ನಾನು ಕಲಾವಿದೆಯಾಗಿ ರಂಜಿಸುತ್ತೇನೆ, ಟಾಸ್ಕ್ ಚೆನ್ನಾಗಿ ಆಡಲೇಬೇಕು ಎಂದರೆ ಆಗಲ್ಲ. ಕ್ರೀಡಾಳುಗೆ ಮನರಂಜನೆ ನೀಡು ಎಂದರೆ ಕಷ್ಟವಾಗುತ್ತದೆ ಎಂದು ಶುಭಾ ಪೂಂಜಾ ಅವರ ಆಟದ ವೈಖರಿ ಬಗ್ಗೆ ಹೇಳಿಕೊಂಡಿದ್ದರು.

Comments are closed.