ಮನೋರಂಜನೆ

ರಾಜಕೀಯ ಬರುವ ಆಸೆಯನ್ನು ಕೈ ಬಿಟ್ಟ ನಟ ರಜನಿಕಾಂತ್ ಹೇಳಿದ್ದೇನು…?

Pinterest LinkedIn Tumblr

ಚೆನ್ನೈ: ನಟ ರಜನಿಕಾಂತ್ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕೀಯ ಬರುವ ಆಸೆಯನ್ನು ಕೈ ಬಿಟ್ಟಿದ್ದಾರೆ.

ರಾಜಕೀಯಕ್ಕೆ ಬರುವ ಆಸೆ ಇಲ್ಲ. ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯೋಜನೆ ನನ್ನಲ್ಲಿಲ್ಲ ಎಂದು ಹೇಳಿದ ಅವರು, ರಜನಿ ಮಕ್ಕಳ್ ಮಂದ್ರಂ(ಆರ್‌ಎಂಎಂ) ಸಂಘಟನೆಯನ್ನು ವಿಸರ್ಜಿಸುವುದಾಗಿ ಹೇಳಿದ್ದಾರೆ. ಈ ಸಂಘಟನೆಯನ್ನು ದತ್ತಿ ನಿಧಿ ಸಂಸ್ಥೆಯನ್ನಾಗಿ ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ರಜನಿಕಾಂತ್ ಈ ಹಿಂದೆ ರಾಜಕೀಯಕ್ಕೆ ಬರುವ ಹಿನ್ನೆಲೆಯಲ್ಲಿ ಆರ್‌ಎಂಎಂ ಸ್ಥಾಪಿಸಿದ್ದರು. ಆದರೆ ಈಗ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಬರುವ ಯೋಚನೆಯಿಂದ ಹಿಂದೆ ಸರಿದಿದ್ದಾರೆ.

2017ರಲ್ಲಿ ಸ್ವಂತ ಪಕ್ಷ ಕಟ್ಟಿ ರಾಜಕೀಯದಲ್ಲಿ ಬದಲಾವಣೆ ತರುವುದಾಗಿ ರಜನಿಕಾಂತ್ ತಿಳಿಸಿದ್ದರು. ಆದರೆ ನಂತರ ಈ ಬಗ್ಗೆ ಹೆಚ್ಚಿನ ವಿವರ ಸಿಕ್ಕಿರಲಿಲ್ಲ.

ಲೋಕಸಭಾ ಚುನಾವಣೆ ವೇಳೆ ಸಹ ರಾಜಕೀಯದ ಕುರಿತು ತಮ್ಮ ನಿರ್ಧಾರ ಘೋಷಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ರಜನಿಕಾಂತ್ ಇನ್ನೂ ಸಮಯ ಬೇಕು ಎಂದಿದ್ದರು. ಇದೆಲ್ಲದರ ಮಧ್ಯೆ ಬಿಜೆಪಿ ಸೇರಲಿದ್ದಾರೆ ಎಂಬ ಅಂಶ ಸಹ ಚರ್ಚೆಗೆ ಬಂದಿತ್ತು. ಕಳೆದ ತಮಿಳುನಾಡುವ ಚುನಾವಣೆಯಲ್ಲಿ ರಜನಿಕಾಂತ್ ಪಕ್ಷದ ಮೂಲಕ ಸ್ಪರ್ಧಿಸಲಿದ್ದಾರೆ ಎಂದು ವರದಿಯೂ ಪ್ರಕಟವಾಗಿತ್ತು. ಈ ನಡುವೆ ಆರ್‌ಎಂಎಂ ಪಕ್ಷದ ಸದಸ್ಯರು ಬೇರೆ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅಭಿಮಾನಿಗಳು ಸೇರ್ಪಡೆಯಾಗಿದ್ದಕ್ಕೆ ಬೇರೆ ಪಕ್ಷಕ್ಕೆ ಸೇರಿದ್ದರೂ ಅವರು ನಮ್ಮವರೇ ಎಂದು ರಜನಿಕಾಂತ್ ಹೇಳಿದ್ದರು.

Comments are closed.