ಕರಾವಳಿ

ಬಾನಂಗಳದಲ್ಲಿ ನಾಳೆ ಮಂಗಳ – ಶುಕ್ರಗ್ರಹಗಳ ಸಂಯೋಗ :ಖಗೋಳಾಸಕ್ತರಿಗೆ ಅಪರೂಪದ ಅವಕಾಶ

Pinterest LinkedIn Tumblr

ಮಂಗಳೂರು, ಜು.12 : ಮಂಗಳ-ಶುಕ್ರಗ್ರಹಗಳು ಜು.13ರ ಮಂಗಳವಾರ ಸನಿಹ ಬರಲಿದ್ದು, (Conjunction) ಈ ಗ್ರಹಗಳು ಉಳಿದ ದಿನಗಳಲ್ಲಿ ದೂರದೂರವಿದ್ದರೂ ಆ ದಿನ ಭೂಮಿಯಿಂದ ಆಗಸವನ್ನು ನೋಡಿದಾಗ ಅವು ಸನಿಹವಿದ್ದಂತೆ ಕಾಣಲಿದೆ ಇದು ಖಗೋಳಾಸಕ್ತರಿಗೆ ಒಂದು ಅಪರೂಪದ ಅವಕಾಶವಾಗಿದೆ.

ಗ್ರಹಗಳನ್ನು ಬರಿಗಣ್ಣಿನಿಂದ, ದುರ್ಬೀನಿನಿಂದ ಅಥವಾ ದೂರದರ್ಶಕದಿಂದ ನೋಡಬಹುದು. ಮೋಡವಿರದ ಶುಭ್ರ ಆಕಾಶವಿದ್ದರೆ ಜುಲೈ 13 ರ ರಾತ್ರಿ ಸುಮಾರು 7.20 ಗಂಟೆಗೆ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನ ನಡುವೆ ನೋಡಿದಾಗ ಮಂಗಳ ಶುಕ್ರ ಸಂಯೋಗದೊಂದಿಗೆ ಬಾಲಚಂದ್ರ ಮತ್ತು ಮಖಾ ನಕ್ಷತ್ರ ಕಾಣಬಹುದಾಗಿದ್ದು, ನಂತರದ ದಿನಗಳಲ್ಲಿ ಈ ಗ್ರಹಗಳು ದೂರವಾಗುವುದನ್ನು ಸಹ ಕಾಣಬಹುದಾಗಿದೆ.

ಖಗೋಳಾಸಕ್ತರು ಈ ಘಟನೆಯ ಫೋಟೊಗಳನ್ನು outreach@iiap.res.in ಗೆ ಕಳುಹಿಸಬಹುದಾಗಿದೆ. ಉತ್ತಮವಾದವುಗಳನ್ನು ಆನ್‍ಲೈನಲ್ಲಿ ಪ್ರಕಟಿಸುದಾಗಿ ಬೆಂಗಳೂರಿನ ಐಐಎ ಪ್ರಕಟಿಸಲಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.