ಮನೋರಂಜನೆ

ಅಭಿಮಾನಿಗಳಿಗಳಲ್ಲಿ ರಜನಿಕಾಂತ್ ಮಾಡಿದ ಮನವಿ ಏನು ಗೊತ್ತೇ…?

Pinterest LinkedIn Tumblr

ಚೆನ್ನೈ: ರಾಜಕೀಯಕ್ಕೆ ಪ್ರವೇಶಿಸುವಂತೆ ರಜನಿಕಾಂತ್‌ ಅಭಿಮಾನಿಗಳು ಮಾಡುತ್ತಿರುವ ಪ್ರತಿಭಟನೆ ಕುರಿತಂತೆ ಭಾರತದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಪತ್ರದಲ್ಲಿ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗುವುದರಿಂದ ನನಗೆ ನೋವಾಗುತ್ತದೆ ಎಂದು ತಿಳಿಸಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಪಕ್ಷ ಕಟ್ಟುವ ಯೋಜನೆಯಿಂದ ತಮಿಳುನಾಡು ಸೂಪರ್‌ಸ್ಟಾರ್ ನಟ ರಜನಿಕಾಂತ್ ಹಿಂದೆ ಸರಿದಿದ್ದರು. ಇದರಿಂದ ತೀವ್ರ ನಿರಾಸೆಗೊಂಡಿರುವ ಅಭಿಮಾನಿಗಳು, ರಜನಿಕಾಂತ್ ಅವರು ತಮ್ಮ ನಿರ್ಧಾರ ಬದಲಾಯಿಸಿ ರಾಜಕೀಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಿ ನಿನ್ನೆಯಷ್ಟೇ ಚೆನ್ನೈನ ವಲ್ಲುವರ್ ಕೊಟ್ಟಂನಲ್ಲಿ ಸಾವಿರಾರು ಜನರು ನೆರೆದು ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ರಜನಿ ಪರ ಘೋಷಣೆಗಳನ್ನು ಕೂಗಿದ್ದರು.

ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ರಜನಿಕಾಂತ್ ಅವರು, ನನ್ನ ಕೆಲ ಅಭಿಮಾನಿಗಳು ಹಾಗೂ ರಜಿನಿ ಮಕ್ಕಳ್ ಮಂದಿರಂನ ಉಚ್ಛಾಟಿತ ಕೆಲ ಕಾರ್ಯಕರ್ತರು ನಾನು ರಾಜಕೀಯ ಪ್ರವೇಶದಿರುವ ನಿರ್ಧಾರವನ್ನು ವಿರೋಧಿಸಿ ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಾನು ಈಗಾಗಲೇ ರಾಜಕೀಯ ಪ್ರವೇಶ ಮಾಡದಿರುವ ಕುರಿತು ನಿರ್ಧಾರ ತೆಗೆದುಕೊಂಡಿದ್ದೇನೆ. ಪದೇ ಪದೇ ಪ್ರತಿಭಟನೆ ಮಾಡಿ ನನ್ನ ಮೇಲೆ ಒತ್ತಡ ಹಾಕುವ ಮೂಲಕ ನೋವು ಕೊಡಬೇಡಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯಕ್ಕೆ ಬರಲು ಸಾಧ್ಯವಾಗದಿರುವ ನನ್ನ ಅಸಮರ್ಥತೆಯ ಕಾರಣಗಳನ್ನು ನಾನು ಈಗಾಗಲೇ ವಿವರಿಸಿದ್ದೇನೆ. ನನ್ನ ನಿರ್ಧಾರವನ್ನು ನಾನು ತಿಳಿಸಿದ್ದೇನೆ. ಆ ರೀತಿಯ ಪ್ರತಿಭಟನೆ ಆಯೋಜಿಸುವ ಮೂಲಕ ದಯವಿಟ್ಟು ಮತ್ತೆ ಮತ್ತೆ ರಾಜಕೀಯಕ್ಕೆ ಬನ್ನಿ ಎಂದು ಒತ್ತಾಯಿಸಿ ನನಗೆ ನೋವು ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

Comments are closed.