ರಾಷ್ಟ್ರೀಯ

ಕೋವಿಡ್-19 ಲಸಿಕೆ ಪ್ರತಿ ಸೀಸೆಗೆ 200 ರೂಪಾಯಿ; ಪ್ರಾಥಮಿಕವಾಗಿ 11 ಮಿಲಿಯನ್ ಡೋಸ್ ಲಸಿಕೆ ಖರೀದಿಸಿದ ಕೇಂದ್ರ

Pinterest LinkedIn Tumblr

ನವದೆಹಲಿ: ಕೋವಿಡ್-19 ಲಸಿಕೆ ಕೋವಿಶೀಲ್ಡ್ ಗಾಗಿ ಕೇಂದ್ರ ಸರ್ಕಾರದಿಂದ ಖರೀದಿ ಆದೇಶವನ್ನು ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಪಡೆದುಕೊಂಡಿದೆ. ಪ್ರತಿ ಸೀಸೆಗೆ 200 ರೂಪಾಯಿ ನಿಗದಿಪಡಿಸಲಾಗಿದೆ. ಜಿಎಸ್ ಟಿ 10 ರೂ. ಸೇರಿದಂತೆ ಒಟ್ಟಾರೇ 210 ರೂ.ಗಳಿಕೆ ಲಸಿಕೆ ದೊರೆಯಲಿದೆ.

ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಪುಣೆ ಮೂಲದ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಔಷಧಿ ತಯಾರಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆ ಹೊರ ಬರುವ ಸಾಧ್ಯತೆಯಿದೆ.

ಪ್ರತಿವಾರ ಕೆಲ ಮಿಲಿಯನ್ ಡೋಸ್ ನಷ್ಟು ಕೋವಿ ಶೀಲ್ಡ್ ನ್ನು ಪೂರೈಸಲಾಗುತ್ತದೆ. ಪ್ರಾಥಮಿಕವಾಗಿ 11 ಮಿಲಿಯನ್ ಡೋಸ್ ಲಸಿಕೆ ಪೂರೈಸುವ ಸಾಧ್ಯತೆಯಿರುವುದಾಗಿ ಮೂಲಗಳು ತಿಳಿಸಿವೆ.ಜನವರಿ 16ರಿಂದ ಕೋವಿಡ್-19 ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ವಾರಾಂತ್ಯದಲ್ಲಿ ಹೇಳಿಕೆ ನೀಡಿತ್ತು.

ಅಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಅಸ್ಟ್ರಾ ಜೆನಿಕಾ ಹಾಗೂ ಭಾರತ್ ಬಯೋಟೆಕ್ ಸ್ವದೇಶಿ ಔಷಧ ತಯಾರಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಯನ್ನು ತುರ್ತಾಗಿ ಬಳಸಬಹುದು ಎಂದು ಈ ತಿಂಗಳ ಆರಂಭದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ-ಐಸಿಎಂಆರ್ ಸೂಚಿಸಿತ್ತು.

ಭಾರತ್ ಬಯೋಟೆಕ್ ಔಷಧಿ ತಯಾರಿಕಾ ಕಂಪನಿ ತಯಾರಿಸುವ ಕೋವಾಕ್ಸಿನ್ ಲಸಿಕೆ ಖರೀದಿಗೂ ಸರ್ಕಾರ ಸಹಿ ಹಾಕಿದೆ ಎಂದು ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ವಾಹಿನಿಯೊಂದು ಹೇಳಿದೆ.

Comments are closed.