ಮನೋರಂಜನೆ

ಬಿಕಿನಿ ತೊಟ್ಟು ಬೀಚ್ ಒಂದರಲ್ಲಿ ಕುಳಿತ ಫೋಟೋದಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಂಗನಾ

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್​ ಇದೀಗ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಬಿಕಿನಿ ತೊಟ್ಟು ಬೀಚ್ ಒಂದರಲ್ಲಿ ಕುಳಿತ ಫೋಟೋ ಹಾಕುವ ಮೂಲಕ ನಟಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೆಕ್ಸಿಕೋದ ಬೀಚ್​​ನಲ್ಲಿ ಬಿಕಿನಿ ತೊಟ್ಟು ಕುಳಿತಿರುವ ಫೋಟೋವನ್ನು ಕಂಗನಾ ಬುಧವಾರ ಬೆಳಗ್ಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಈ ಫೋಟೋ ಅಪ್​ಲೋಡ್ ಆಗುತ್ತಿದ್ದಂತೆಯೇ ಅನೇಕರು ಕಂಗನಾರ ಕಾಲು ಎಳೆಯುವುದಕ್ಕೆ ಆರಂಭಿಸಿದ್ದಾರೆ. ಸದಾ ಹಿಂದುತ್ವ, ಸನಾತನ ಧರ್ಮ ಎನ್ನುವ ನಟಿ ಈ ರೀತಿ ಬಟ್ಟೆ ತೊಟ್ಟು ಕುಳಿತಿರುವುದು ಸರಿಯೇ ಎಂದು ಅನೇಕರು ಪ್ರಶ್ನಿಸಿದ್ದರು. ಇದೀಗ ನಟಿ ಅದಕ್ಕೂ ಉತ್ತರ ಕೊಟ್ಟಿದ್ದಾರೆ.

ಇನ್​ಸ್ಟಾಗ್ರಾಂ ಫೋಟೋ ಹಾಕಿ ಎಂಟು ಗಂಟೆಗಳಲ್ಲೇ ನಟಿ ಟ್ವಿಟ್ಟರ್​ನಲ್ಲಿ ತನ್ನದೊಂದು ಫೋಟೋ ಹಾಕುವ ಮೂಲಕ ನೆಟ್ಟಿಗರ ವಿರುದ್ಧ ಹರಿಹಾಯ್ದಿದ್ದಾರೆ. ‘ನನ್ನ ಬಿಕಿನಿ ಚಿತ್ರವನ್ನು ನೋಡಿ, ಕೆಲವರು ನನಗೆ ಧರ್ಮ ಮತ್ತು ಸನಾತನ ಉಪನ್ಯಾಸ ನೀಡುತ್ತಿದ್ದಾರೆ. ಒಂದು ವೇಳೆ ತಾಯಿ ಭೈರವಿಯು ಕೂದಲು ಬಿಟ್ಟುಕೊಂಡು, ಬಟ್ಟೆಯಿಲ್ಲದೆ, ರಕ್ತ ಕುಡಿಯುವ ಚಿತ್ರದೊಂದಿಗೆ ಹೊರಬಂದರೆ ನಿಮಗೆ ಏನಾಗುತ್ತದೆ? ನೀವು ಭಯಗೊಳ್ಳುತ್ತೀರಿ ಮತ್ತು ಭಕ್ತಯಿಂದ ನೋಡುತ್ತೀರಲ್ಲವೇ? ಧರ್ಮದ ಗುತ್ತಿಗೆದಾರರಾಗಬೇಡಿ.. ಜೈ ಶ್ರೀ ರಾಮ್’ ಎಂದು ಬರೆದುಕೊಂಡಿದ್ದಾರೆ.

Comments are closed.