ಮನೋರಂಜನೆ

ತಮಿಳು ನಟ ಕಮಲ್​ ಹಾಸನ್​ ಚುನಾವಣಾ ಪ್ರಣಾಳಿಕೆಯಿಂದ ಸಂತಸಗೊಂಡ ಮಹಿಳೆಯರು

Pinterest LinkedIn Tumblr


ಕಾಂಚೀಪುರಂ: ತಮಿಳುನಾಡು ವಿಧಾನಸಭೆಗೆ ‘ಮಕ್ಕಳ್‌ ನೀದಿ ಮಯ್ಯಂ'(ಎಂಎನ್‌ಎಂ) ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿದಿರುವ ಖ್ಯಾತ ನಟ ಕಮಲ್​ ಹಾಸನ್​ ಅವರ ಚುನಾವಣಾ ಪ್ರಣಾಳಿಕೆಯಲ್ಲಿ ಇರುವ ಭರವಸೆ ಸದ್ಯ ಭಾರಿ ಸುದ್ದಿ ಮಾಡುತ್ತಿದೆ. ಏಕೆಂದರೆ ಈ ಪ್ರಣಾಳಿಕೆ ಓದಿದ ಗೃಹಿಣಿಯರು ಅರ್ಥಾತ್​ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿರುವ ಮಹಿಳೆಯರಂತೂ ಬಹಳ ಖುಷಿಯಾಗಿದ್ದಾರೆ.

ಇದಕ್ಕೆ ಕಾರಣ, ಮನೆಯಲ್ಲಿ ನಿತ್ಯ ಕೆಲಸಗಳನ್ನು ಮಾಡುವ ಮಹಿಳೆಯರಿಗೂ ವೇತನ ಸಿಗುವಂತೆ ಮಾಡುವುದಾಗಿ ಘೋಷಿಸಿದ್ದಾರೆ ಈ ನಟ. ಹೊರಗಡೆ ಉದ್ಯೋಗ ಮಾಡಿ ದುಡಿದರಷ್ಟೇ ಅದು ದುಡಿಮೆ, ದಿನಪೂರ್ತಿ ಮನೆಯಲ್ಲಿ ದುಡಿದು ಕುಟುಂಬಸ್ಥರ ಕಾಳಜಿ ವಹಿಸುವ ಗೃಹಿಣಿಗೆ ಸಂಬಳವೂ ಇಲ್ಲ, ಪ್ರಶಂಸೆಯ ಮಾತೂ ಇಲ್ಲ ಎನ್ನುವ ನೋವು ಇದೆ. ಇದನ್ನು ಸುಳ್ಳು ಮಾಡಿ, ಗೃಹಿಣಿಯರಿಗೂ ವೇತನ ಸಿಗುವಂತೆ ಮಾಡುತ್ತೇನೆ ಎಂದಿದ್ದಾರೆ ಕಮಲ್​ ಹಾಸನ್​.

ಗೌರವಧನ ರೂಪದಲ್ಲಿ ವೇತನ ನೀಡುವ ಮೂಲಕ ಅವರಿಗೆ ಸಲ್ಲತಕ್ಕ ಘನತೆಯನ್ನು ನಮ್ಮ ಪಕ್ಷ ನೀಡಲಿದೆ. ಇದರ ಜತೆಗೆ ಪ್ರತಿಯೊಂದು ಮನೆಗೆ ಆಪ್ಟಿಕಲ್‌ ಫೈಬರ್‌ ಮೂಲಕ ಹೈಸ್ಪೀಡ್‌ ಇಂಟರ್​ನೆಟ್​ ಒದಗಿಸಲಾಗುವುದು. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ತಮ್ಮ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ಶ್ರಮಿಸಲಿದೆ ಎಂದಿದ್ದಾರೆ ಕಮಲ್​.

ಇವೂ ಸೇರಿದಂತೆ ಒಟ್ಟು 7 ಸೂತ್ರಗಳ ಅಜೆಂಡಾಗಳನ್ನು ಹೊಂದಿರುವ ಅವರ ಪ್ರಣಾಳಿಕೆಯೊಂದಿಗೆ ಸದ್ಯ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

Comments are closed.