ರಾಷ್ಟ್ರೀಯ

ಪಶ್ಚಿಮ ಬಂಗಾಳ: ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗ ತೃಣಮೂಲ ಕಾಂಗ್ರೆಸ್ ಪಕ್ಷಾಂತರಿಗಳ ನಡುವೆ ಭಿನ್ನಮತ

Pinterest LinkedIn Tumblr


ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ನ ಹಲವು ನಾಯಕರು ಬಿಜೆಪಿ ಸೇರಿದ್ದು, ಈಗ ಅಲ್ಲಿ ಮೂಲ ಹಾಗೂ ವಲಸಿಗರ ನಡುವೆ ಭಿನ್ನಮತ ಸ್ಫೋಟಗೊಂಡಿದೆ.

ಕೆಲವು ದಿನಗಳ ಹಿಂದಷ್ಟೇ ತಮ್ಮ ಪ್ರತಿಸ್ಪರ್ಧಿಗಳಾಗಿದ್ದ ನಾಯಕರು ಒಪ್ಪಿಕೊಳ್ಳಲು ಮೂಲ ಬಿಜೆಪಿಗರು ಸಿದ್ಧರಿಲ್ಲ. ಹೀಗಾಗಿ ಕಳೆದ 24 ಗಂಟೆಗಳಲ್ಲಿ ಪಶ್ಚಿಮ ಮಿಡ್ನಾಪೋರ್ ಮತ್ತು ದುರ್ಗಾಪುರದಲ್ಲಿ ಪಕ್ಷದ ಹಳೆಯ ಕಾರ್ಯಕರ್ತರು ಮತ್ತು ಹೊಸಬರ ನಡುವೆ ಘರ್ಷಣೆಗಳು ನಡೆದಿವೆ. ಅಲ್ಲದೆ ಟಿಎಂಸಿ ಪಕ್ಷಾಂತರಿಗಳನ್ನು ಸ್ವಾಗತಿಸುವ ನಿರ್ಧಾರವನ್ನು ವಿರೋಧಿಸುವ ಪೋಸ್ಟರ್‌ಗಳು ಅನೇಕ ಸ್ಥಳಗಳಲ್ಲಿ ಕಂಡುಬಂದಿವೆ.

ದುರ್ಗಾಪುರದಲ್ಲಿ ಮಂಗಳವಾರ ಪಕ್ಷದ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರ ಸಮ್ಮುಖದಲ್ಲಿ ಟಿಎಂಸಿ ಬೆಂಬಲಿಗರು ಬಿಜೆಪಿಗೆ ಸೇರುತ್ತಿದ್ದ ವೇಳೆ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

ಎರಡು ಗುಂಪುಗಳು ಪರಸ್ಪರ ಪ್ಲಾಸ್ಟಿಕ್ ಕುರ್ಚಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಘಟನೆ ಪಶ್ಚಿಮ ಮಿಡ್ನಾಪೋರದ ನಾರಾಯಣಗಢದಲ್ಲೂ ನಡೆದಿದೆ.

ಡಿಸೆಂಬರ್ 19 ರಂದು ಮಿಡ್ನಾಪೋರ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಟಿಎಂಸಿ ಮಾಜಿ ಪ್ರಬಲ ನಾಯಕ ಸುವೇಂದು ಅಧಿಕಾರಿ ಅವರು ಆಡಳಿತ ಪಕ್ಷದ ಆರು ಶಾಸಕರು ಮತ್ತು ಬೆಂಬಲಿಗರೊಂದಿಗೆ ಕೇಸರಿ ಪಕ್ಷ ಸೇರಿದ ನಂತರ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

Comments are closed.