ರಾಷ್ಟ್ರೀಯ

ಅಶ್ಲೀಲ ಚಿತ್ರ ಚಿತ್ರಿಸಿ ಭಾರತೀಯ ಯೋಧರನ್ನೇ ಬ್ಲಾಕ್​ಮೇಲ್​ ಮಾಡುತ್ತಿದ್ದ ಖತರ್ನಾಕ್​ ಗ್ಯಾಂಗ್​!

Pinterest LinkedIn Tumblr


ಲಖನೌ: ಭಾರತೀಯ ಸೇನೆಯ ಯೋಧರನ್ನೇ ತಮ್ಮ ಬ್ಲಾಕ್​ಮೇಲ್​ ಟಾರ್ಗೆಟ್​ಗಳಾಗಿ ಮಾಡಿಕೊಳ್ಳುತ್ತಿದ್ದ ಗ್ಯಾಂಗ್​ ಒಂದನ್ನು ಉತ್ತರ ಪ್ರದೇಶದ ಮೀರತ್​ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಓರ್ವ ಮಹಿಳೆಯೂ ಇರುವ ಈ ಗ್ಯಾಂಗ್​ ರಾಜಸ್ಥಾನ, ಹರಿಯಾಣ ಮತ್ತು ಗುಜರಾತ್​ನ ಸೈನಿಕರನ್ನು ಗುರಿಯಾಗಿಸಿಕೊಂಡಿತ್ತು ಎನ್ನಲಾಗಿದೆ.

ಇತ್ತೀಚೆಗೆ ಗ್ಯಾಂಗ್​ನ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಯುವತಿಯು ಸಾಮಾಜಿಕ ಜಾಲತಾಣಗಳಲ್ಲಿ ಯೋಧರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು, ನಂತರ ಅವರ ಅಶ್ಲೀಲ ಚಿತ್ರಗಳನ್ನು ಚಿತ್ರಿಸಿ, ಬ್ಲಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು, ಸೈಬರ್​ ಸೆಲ್​ಗಳ ಸಹಾಯದಿಂದ ಗ್ಯಾಂಗ್​ನ್ನು ಪತ್ತೆ ಹಚ್ಚಿದ್ದಾರೆ.

ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿಗಳ ಸ್ಥಾನದಲ್ಲಿರುವ ಮಹಿಳೆ ಮತ್ತು ಆಕೆಯ ಸಂಗಾತಿಯನ್ನು ಪೊಲೀಸರು ಮಾಧ್ಯಮಗಳ ಮುಂದೆ ನಿಲ್ಲಿಸಿದ್ದಾರೆ. ಆರೋಪಿಗಳು ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸೈನಿಕರಷ್ಟೇ ಅಲ್ಲದೆ ಕೆಲ ಸಾಮಾನ್ಯ ಜನರಿಗೂ ಈ ರೀತಿ ಬ್ಲಾಕ್​ಮೇಲ್​ ಮಾಡಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Comments are closed.