ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಮೇಲೆ ವಿವಾದ ಮಾಡಿಕೊಳ್ಳುವುದು ಕಾಮನ್. ಅದೇ ರೀತಿ ನಟಿ ಪವಿತ್ರ ಪೂನಿಯಾ ಬಿಗ್ಬಾಸ್ಗೆ ಹೋಗುವ ಮುನ್ನವೇ ಮಾಡಿಕೊಂಡ ಕಿರಿಕ್ಗಳು ಈಗ ಬಯಲಿಗೆ ಬಂದಿವೆ. ಗಂಡನಿಗೆ ನಾಲ್ಕು ಬಾರಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ!
ಹಿಂದಿಯ ಬಿಗ್ ಬಾಸ್ ಸೀಸನ್ 14 ಯಶಸ್ವಿಯಾಗಿ ಪ್ರಸಾರ ಆಗುತ್ತಿದೆ. ಇತ್ತೀಚೆಗಷ್ಟೇ ನಟಿ ಪವಿತ್ರ ಪೂನಿಯಾ ಎಲಿಮಿನೇಟ್ ಆಗಿದ್ದಾರೆ. ಅದರ ಬೆನ್ನಲ್ಲೇ ಅವರ ಮೇಲೆ ಸರಣಿ ಆರೋಪ ಕೇಳಿಬಂದಿದೆ. ತಮಗೆ ಮದುವೆ ಆಗಿರುವ ವಿಚಾರವನ್ನು ಮುಚ್ಚಿಟ್ಟು ನಾಲ್ವರ ಜೊತೆ ಡೇಟಿಂಗ್ ಮಾಡಿದ್ದಾರೆ ಎಂದು ಅವರ ಪತಿ ಆರೋಪಿಸಿದ್ದಾರೆ!
ಹೋಟೆಲ್ ಉದ್ಯಮಿ ಆಗಿರುವ ಸುಮಿತ್ ಮಹೇಶ್ವರಿ ಎಂಬುವವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಆರೋಪಗಳನ್ನು ಮಾಡಿದ್ದಾರೆ. ‘ಬಹಳ ಹಿಂದೆಯೇ ಪವಿತ್ರ ಪೂನಿಯಾ ಜೊತೆ ನನ್ನ ಮದುವೆ ಆಗಿತ್ತು. ಆದರೆ ಅದನ್ನು ಬಹಿರಂಗಪಡಿಸಬಾರದು ಎಂದು ಪವಿತ್ರ ಹೇಳಿದ್ದರು. ಆದರೆ ಅವರು ನನಗೆ ನಾಲ್ಕು ಬಾರಿ ಮೋಸ ಮಾಡಿದ್ದಾರೆ’ ಎಂದಿದ್ದಾರೆ ಸುಮಿತ್.
‘ನಾವಿಬ್ಬರು ಗಂಡ-ಹೆಂಡತಿ. ಆದರೆ ಈ ವಿಚಾರವನ್ನು ಪವಿತ್ರ ಮುಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಪಾರಸ್ ಛಾಬ್ರಾ ಜೊತೆ ಅವರು ಡೇಟಿಂಗ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಅದನ್ನು ನಾನು ಪಾರಸ್ಗೂ ತಿಳಿಸಿದ್ದೆ. ನನ್ನ ಕೈ ಮೇಲೆ ಆಕೆಯ ಟ್ಯಾಟೂ ಇನ್ನೂ ಇದೆ. ನನ್ನ ಕಡೆಯಿಂದ ಏನೂ ಬದಲಾಗಿಲ್ಲ ಅಂತ ಪಾರಸ್ಗೆ ಹೇಳಿದ್ದೆ. ಆಕೆಯಿಂದ ನನ್ನ ಕುಟುಂಬದವರಿಗೆ ಅವಮಾನ ಆಗಿದೆ. ಬಹಳ ದಿನಗಳಿಂದ ನಾವು ಇದನ್ನು ಅನುಭವಿಸುತ್ತ ಬಂದಿದ್ದೇವೆ’ ಎಂದು ಸುಮಿತ್ ಹೇಳಿದ್ದಾರೆ.
ಸುಮಿತ್ ಜೊತೆ ಮದುವೆ ಆದ ನಂತರ ಪಾರಸ್ ಛಾಬ್ರಾ, ನಂತರ ಪ್ರತೀಕ್ ಸೆಹಜ್ಪಾಲ್, ಆ ಬಳಿಕ ಇನ್ನೊಬ್ಬ ವ್ಯಕ್ತಿಯ ಜೊತೆಗೆ ಪವಿತ್ರಾ ಡೇಟಿಂಗ್ ಮಾಡಿದ್ದರಂತೆ. ಈಗ ಬಿಗ್ ಬಾಸ್ ಸ್ಪರ್ಧಿ ಆಗಿರುವ ಇಜಾಜ್ ಖಾನ್ ಜೊತೆ ಅವರು ಸಂಬಂಧ ಬೆಳೆಸಲು ರೆಡಿ ಆಗಿದ್ದಾರೆ. ಅದು ಸುಮಿತ್ ತಾಳ್ಮೆಯನ್ನು ಕೆಡಿಸಿದೆ. ‘ಇಲ್ಲಿಯವರೆಗೆ ನಾನು ಆಕೆಯನ್ನು ಕ್ಷಮಿಸಿದ್ದೇನೆ. ಆದರೆ ಇನ್ಮುಂದೆ ಸಾಧ್ಯವಿಲ್ಲ. ಮತ್ತೆ ಸರಿಪಡಿಸಲಾಗದ ಮಟ್ಟಿಗೆ ನಮ್ಮ ಸಂಬಂಧ ಹಾಳಾಗಿದೆ’ ಎಂದು ಸುಮಿತ್ ಹೇಳಿದ್ದಾರೆ.
Comments are closed.