ಮನೋರಂಜನೆ

ಚಿತ್ರರಂಗಕ್ಕೆ ಧೈರ್ಯ ತುಂಬಿದ ಚಿತ್ರ ಆ್ಯಕ್ಟ್​​ 1978..!

Pinterest LinkedIn Tumblr


ಕೊರೋನಾ ಸಮಯದಲ್ಲಿ ಚಿತ್ರ ಬಿಡುಗಡೆ​ ಮಾಡೋಕ್ಕೆ ಕೆಲವರು ಮೀನಾಮೇಷ ಎಣಿಸ್ತಿದ್ದಾರೆ.. ದೊಡ್ಡ ಸಿನಿಮಾಗಳು ಬರದೇ ಇದ್ರೆ, ಪ್ರೇಕ್ಷಕರನ್ನ ಥಿಯೇಟರ್​ಗೆ ಕರ್ಕೊಂಡ್​ ಬರೋದು ಕಷ್ಟ ಅನ್ನೋ ಮಾತುಗಳು ಕೇಳಿಬರ್ತಿತ್ತು.. ಇಂತಾ ಹೊತ್ತಲ್ಲೇ ಆಕ್ಟ್​ 1978 ಸಿನಿಮಾ ಚಿತ್ರರಂಗಕ್ಕೆ ಧೈರ್ಯ ತುಂಬಿದೆ.. ಕೊರೊನಾ ಭಯ ಬಿಟ್ಟು ಪ್ರೇಕ್ಷಕರು ಈ ಸೋಷಿಯಲ್​ ಥ್ರಿಲ್ಲರ್ ಸಿನಿಮಾ ನೋಡೋಕ್ಕೆ ಬರ್ತಿರೋದು, ಚಿತ್ರರಂಗಕ್ಕೆ ಹೊಸ ಭರವಸೆ ಮೂಡಿಸಿದೆ..

ಭ್ರಷ್ಟ ವ್ಯವಸ್ಥೆಗೆ ಚುಚ್ಚುಮದ್ದು ನೀಡುವ ಆಕ್ಟ್​- 1978 ಸಿನಿಮಾ ಸಕ್ಸಸ್ ಕಂಡಿದೆ.. ಕೊರೋನಾ ಆರ್ಭಟದ ನಡುವೆಯೂ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆತರ್ತಿದೆ.. ದೊಡ್ಡ ಸಿನಿಮಾ ಬಂದ್ರೆ, ಮಾತ್ರ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರೋದು ಅನ್ನೋ ಮಾತನ್ನ ಸುಳ್ಳು ಮಾಡಿದೆ.. ಸಮಾಜದ ಹುಳುಕುಗಳಿಗೆ ಕನ್ನಡಿ ಹಿಡಿಯುವಂತಹ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ..

ಹರಿವು, ನಾತಿಚರಾಮಿ ನಂತ್ರ ಮೊತ್ತೊಮ್ಮೆ ನಿರ್ದೇಶಕ ಮನ್ಸೋರೆ ಆಕ್ಟ್​ 1978 ಸಿನಿಮಾದಿಂದ ಸಕ್ಸಸ್​ ಕಂಡಿದ್ದಾರೆ.. ದೈನಂದಿನ ಬದುಕಿನಲ್ಲಿ ಎಲ್ಲರೂ ಕಾಣುವ ವ್ಯವಸ್ಥೆಯನ್ನೇ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ಶಹಬಾಶ್​ಗಿರಿ ಗಿಟ್ಟಿಸಿದ್ದಾರೆ.. ಯಜ್ಞಾ ಶೆಟ್ಟಿ, ಬಿ.ಸುರೇಶ, ಅಚ್ಯುತ್​ ಕುಮಾರ್, ಅವಿನಾಶ್​, ಪ್ರಮೋದ್​ ಶೆಟ್ಟಿಯಂತಹ ಪ್ರತಿಭಾನ್ವಿತ ಕಲಾವಿದರು ಮನ್ಸೋರೆ ಪ್ರಯತ್ನಕ್ಕೆ ಸಾಥ್​ ಕೊಟ್ಟಿದ್ದಾರೆ.. ಚಾಲೆಂಜಿಂಗ್​ ಸ್ಟಾರ್​ ದರ್ಶನ್​, ಕಿಚ್ಚ ಸುದೀಪ್, ಶ್ರೀಮುರಳಿ ಸೇರಿದಂತೆ ಸ್ಯಾಂಡಲ್​ವುಡ್​ ಸ್ಟಾರ್ಸ್​ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ..

ನಿಜ.. ಕೊರೋನಾ ಸಂಕಷ್ಟದ ನಡುವೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರ್ತಾರಾ..? ಇಲ್ವಾ ಅನ್ನೋ ಆತಂಕ ಇವತ್ತಿಗೂ ಚಿತ್ರರಂಗವನ್ನ ಕಾಡ್ತಿದೆ.. ದೊಡ್ಡ ಸಿನಿಮಾಗಳನ್ನ ರಿಲೀಸ್​ ಮಾಡೋಕ್ಕೆ ಹಿಂದು ಮುಂದು ನೋಡುವಂತಾಗಿದೆ.. ಆದ್ರೆ, ಆಕ್ಟ್​ 1978 ಸಿನಿಮಾ ಎಲ್ಲರಿಗೂ ಧೈರ್ಯ ತುಂಬುತ್ತಿದೆ.. ಈಗಾಗಲೇ ಸಾಲು ಸಾಲು ಸಿನಿಮಾಗಳು ರಿಲೀಸ್​ಗೆ ರೆಡಿಯಾಗ್ತಿದೆ.. ಆಕ್ಟ್​ 1978 ಸಿನಿಮಾ ಯಶಸ್ವಿಯಾಗಿ ಒಂದು ವಾರ ಪೂರೈಸಿದ್ರೆ, ಈ ವಾರ ಮತ್ತೆರಡು ಸಿನಿಮಾಗಳು ರಿಲೀಸ್​ ಆಗಿದೆ..

ನಿಧಾನವಾಗಿ ಚಿಕ್ಕ ಚಿಕ್ಕ ಸಿನಿಮಾಗಳು ರಿಲೀಸ್​ ಆಗ್ತಿದ್ದು, ದೊಡ್ಡ ಸಿನಿಮಾಗಳನ್ನ ರಿಲೀಸ್​ ಮಾಡಲು ನಿರ್ಮಾಪಕರು ಮುಂದಾಗ್ತಿದ್ದಾರೆ..ಕ್ರಿಸ್​ಮಸ್​ ವೇಳೆಗೆ ರಾಬರ್ಟ್​, ಪೊಗರು ಸಿನಿಮಾಗಳನ್ನ ರಿಲೀಸ್ ಮಾಡೋ ಲೆಕ್ಕಾಚಾರ ಗಾಂಧೀನಗರದಲ್ಲಿ ನಡೀತಿದೆ.

Comments are closed.