ಮನೋರಂಜನೆ

ದಢೂತಿಯಾಗಿದ್ದ ನಟಿ ಕಾವ್ಯಾ ಶಾ ಬಳುಕುವ ಬಳ್ಳಿಯಂತಾಗಿದ್ದು ಹೇಗೆ ಗೊತ್ತಾ?

Pinterest LinkedIn Tumblr


ನಟಿ, ನಿರೂಪಕಿ ಕಾವ್ಯಾ ಶಾ ದಢೂತಿಯಾಗಿದ್ದ ತಾನು ಹೇಗೆ ತೂಕ ಇಳಿಸಿಕೊಂಡೆ ಎಂಬುದರ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

‘ವಯಸ್ಸಿಗೆ ತಕ್ಕಂತೆ ದಪ್ಪ ಆಗಿರುತ್ತೇವೆ, ಲೈಫ್‌ಸ್ಟೈಲ್ ಕೂಡ ಅಷ್ಟೊಂದು ಚೆನ್ನಾಗಿರೋದಿಲ್ಲ. ಶೂಟಿಂಗ್‌ನಲ್ಲಿ ಪಾಲ್ಗೊಂಡಾಗ ವರ್ಕೌಟ್ ಮಾಡೋದು ಕಷ್ಟವಾಗುತ್ತದೆ. ಯಾವ ರೀತಿಯ ಆಹಾರ ತಗೊಬೇಕು ಅಂತ ಗೊತ್ತಿರಲಿಲ್ಲ. ಹೀಗಾಗಿ ನಾನು ದಪ್ಪ ಆಗಿದ್ದೆ. ಬೇರೆ ಬೇರೆ ರೀತಿಯ ಅಡುಗೆ ಮಾಡೋದು ಕಲಿತುಕೊಂಡೆ. ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಂಡೆ’ ಎಂದು ಕಾವ್ಯಾ ಶಾ ಹೇಳಿದ್ದಾರೆ.

‘ನಮ್ಮ ಆಹಾರದಲ್ಲಿ ಕಾರ್ಬೋಹೈಡ್ರೆಡ್, ಫೈಬರ್, ಪ್ರೋಟಿನ್, ವಿಟಾಮಿನ್ ಅನ್ನು ಸಮನಾಗಿ ಇರಬೇಕು. ತರಕಾರಿ, ಕಾಳು-ಧಾನ್ಯ, ಡ್ರೈ ಫ್ರುಟ್ಸ್ ತಿನ್ನಬೇಕು. ನಿದ್ದೆ ಕಡಿಮೆ ಮಾಡಿದರೆ ತೂಕ ಇಳಿಸಿಕೊಳ್ಳಲಾಗೋದಿಲ್ಲ. ಸಾಕಷ್ಟು ನೀರು ಕುಡಿಯಬೇಕು. ನಾನು ಎಲ್ಲ ಡಯಟ್ ಮಾಡಿದ್ದೇನೆ, ಆದರೆ ಈ ಡಯಟ್ ಬ್ರೇಕ್ ಮಾಡಿದಮೇಲೆ ಮತ್ತೆ ದಪ್ಪ ಆಗಿಬಿಡ್ತೀವಿ. ಹೀಗಾಗಿ ನಮ್ಮ ಆಹಾರದಲ್ಲಿ ಸಮತೋಲನ ಇದ್ದರೆ ತೂಕ ಇಳಿಸಿಕೊಳ್ಳುವುದರ ಜೊತೆಗೆ ಆ ತೂಕವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು’ ಎಂದು ಕಾವ್ಯಾ ಶಾ ಹೇಳಿದ್ದಾರೆ.

‘ಎಷ್ಟೇ ವರ್ಕೌಟ್ ಮಾಡಿದರೂ ಕೂಡ ಡಯೆಟ್ ತುಂಬ ಮುಖ್ಯ. ನಾನು ಜಿಮ್‌ಗೆ ಹೋದರೂ ಕೂಡ ಸಣ್ಣ ಆಗುತ್ತಿರಲಿಲ್ಲ, ಯಾವಾಗ ಆಹಾರ ಸೇವನೆಯಲ್ಲಿ ಬದಲಾವಣೆ ತರುತ್ತೇವೆಯೋ ಆಗಲೇ ಸಣ್ಣ ಆಗಲು ಸಾಧ್ಯ. ಸಣ್ಣ ಆಗಲು ಅನ್ನ ಬಿಡಬೇಕು ಎನ್ನೋದು ಸುಳ್ಳು. ಹೀಗಂತ ರಾಶಿ ರಾಶಿ ಅನ್ನ ತಿಂದರೆ ಮಾತ್ರ ನಿಜಕ್ಕೂ ದಪ್ಪ ಆಗುತ್ತೇವೆ. ಒಳ್ಳೆಯ ಅಕ್ಕಿಯಿಂದ ಮಾಡಿದ ಅನ್ನ ಊಟ ಮಾಡಿದರೆ ಸೂಕ್ತ. ಮನುಷ್ಯರಾಗಿ ಹುಟ್ಟಿದಮೇಲೆ ಊಟ-ತಿಂಡಿಗೋಸ್ಕರ ದುಡಿಯುತ್ತೇವೆ. ಹೀಗಾಗಿ ಎಲ್ಲವನ್ನು ತಿಂದರೂ ಕೂಡ ಕ್ಯಾಲರಿ ಲೆಕ್ಕ ಹಾಕಿಕೊಂಡು ತಿನ್ನಬೇಕು’ ಎಂದು ಹೇಳಿದ್ದಾರೆ.

‘ಸಕ್ಕರೆ ಬದಲು ಹೆಚ್ಚು ಬೆಲ್ಲ ಬಳಸುತ್ತಿದ್ದೆ. ಎಷ್ಟು ಸಾಧ್ಯವೋ ಅಷ್ಟು ಸಕ್ಕರೆಯನ್ನು ತಿನ್ನೋದಿಲ್ಲ. ಒಂದು ತಿಂಗಳಲ್ಲಿ 4ಕೆಜಿ ತೂಕ ಇಳಿಸಿಕೊಂಡೆ. ದಪ್ಪ ಆಗಿದ್ದಾಗ 52 ಕೆಜಿ ದಪ್ಪ ಇದ್ದೆ, ಸಣ್ಣ ಆಗಿ 47 ಕೆಜಿ ಆದೆ, ಎರಡೂವರೆ ವರ್ಷದಿಂದ ನಾನು ಇದೇ ತೂಕವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ಲಾಕ್‌ಡೌನ್‌ ನಂತರ ಮನೆಯಲ್ಲಿಯೇ ವರ್ಕೌಟ್ ಮಾಡುತ್ತಿದ್ದೇನೆ’ ಎಂದು ಕಾವ್ಯಾ ಶಾ ಹೇಳಿದ್ದಾರೆ.

ಮನೋರಂಜನ್ ರವಿಚಂದ್ರನ್ ಅಭಿನಯದ ‘ಮುಗಿಲ್‌ಪೇಟೆ’ ಸಿನಿಮಾ ಹಾಗೂ ತಮಿಳಿನಲ್ಲಿ ಸಂತಾನಂ ಅವರ ಸಿನಿಮಾದಲ್ಲಿ ಕಾವ್ಯಾಶಾ ನಟಿಸುತ್ತಿದ್ದು, ಅದರ ಶೂಟಿಂಗ್ ನಡೆಯುತ್ತಿದೆಯಂತೆ. ಇನ್ನು ಕೆಲ ಪ್ರಾಜೆಕ್ಟ್‌ಗಳ ಆಫರ್ ಬಂದಿದ್ದು ಯೋಚನೆ ಮಾಡಿಕೊಂಡು ಕಾವ್ಯಾ ಶಾ ಪಾತ್ರ ಆಯ್ಕೆ ಮಾಡಿಕೊಳ್ಳಲಿದ್ದಾರೆ.

Comments are closed.